ಮಾಸ್ಕೋ: (Mascow) ರಷ್ಯಾದ ಕೊಸ್ಟ್ರೋಮಾ ನಗರದ ಕೆಫೆಯಲ್ಲಿ (Russia Cafe Fire) ಸಂಭವಿಸಿದ ಬೆಂಕಿ ಅವಘಡದಲ್ಲಿ 13 ಮಂದಿ ಸಾವಿಗೀಡಾಗಿದ್ದು, ಅವಘಡದಲ್ಲಿ ಸಿಲುಕಿದ್ದ 250ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಬೆಂಕಿ ದುರಂತಕ್ಕೆ 13 ಜನರು ಬಲಿಯಾಗಿದ್ದಾರೆ ಎಂಬುದು ಪ್ರಾಥಮಿಕ ವರದಿ ಮಾಹಿತಿಯಿಂದ ತಿಳಿದುಬಂದಿದೆ ಎಂದು ಸ್ಥಳೀಯ ಗವರ್ನರ್ ಸೆರ್ಗೆಯ್ ಸಿಟ್ನಿಕೋವ್ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ನೋಡಿ.. ಅಲ್ಲಿ ಪ್ರತಿಭಾವಂತರಿದ್ದಾರೆ: ಪುಟಿನ್ ಬಣ್ಣನೆ
ಮಾಸ್ಕೋದ ಈಶಾನ್ಯಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ನಗರದಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಾಗ ಕಟ್ಟಡದಿಂದ 250 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ಘಟನೆಯಲ್ಲಿ ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ಬೆಂಕಿಯು 3,500 ಚದರ ಮೀಟರ್ಗೆ ವ್ಯಾಪಿಸಿತ್ತು. ರಕ್ಷಣಾ ಪಡೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ ಎಂದು ಸಿಟ್ನಿಕೋವ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್