ಜೈಪುರ: ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಮದುವೆ ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ 13 ಮಂದಿ ಮೃತಪಟ್ಟಿದ್ದು, 18ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಪ್ರತಾಪ್‍ಗಢ ಜಿಲ್ಲೆಯಲ್ಲಿ ನಡೆದಿದೆ.
ಈ ಅಪಘಾತ ರಾಮದೇವ ದೇವಸ್ಥಾನ ಬಳಿ ರಾಜ್ಯ ಹೆದ್ದಾರಿ 113 ರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಟ್ರಕ್ ನಿಂಬಹೆರಾದಿಂದ ಬಾನ್ಸ್ವಾರಾಕ್ಕೆ ಹೋಗುತ್ತಿತ್ತು. ಪ್ರತಾಪ್‍ಗಢ ಜಿಲ್ಲೆಯ ಬಳಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಮದುವೆ ಮೆರವಣಿಗೆಯ ಜನರ ಮೇಲೆ ಏಕಾಏಕಿ ವೇಗವಾಗಿ ಬಂದು ಟ್ರಕ್ ಹರಿದಿದೆ. ಇದರಿಂದ ಸ್ಥಳದಲ್ಲೇ ಮಕ್ಕಳು ಸೇರಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಡಿಎಸ್‍ಪಿ ವಿಜಯ್ ಪಾಲ್ ಸಿಂಗ್ ಸಂಧು ತಿಳಿಸಿದ್ದಾರೆ.
Advertisement
Advertisement
ದೌಲತ್ರಂ (60), ಭರತ್ (30), ಶುಭಾಮ್ (5), ಚೊಟು (5), ದಿಲೀಪ್ (11), ಅರ್ಜುನ್ (15), ಇಶು (19), ರಮೇಶ್ (30) ಮತ್ತು ಕರಣ್ (28) ಮೃತ ದುರ್ದೈವಿಗಳು. ಇನ್ನುಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತಪಟ್ಟವರಲ್ಲಿ ಅಧಿಕ ಮಕ್ಕಳಿದ್ದಾರೆ ಎಂದು ಪೊಲೀಸ್ ಹೇಳಿದ್ದಾರೆ.
Advertisement
ಅಪಘಾತದ ಬಗ್ಗೆ ತಿಳಿದು ನನಗೆ ತುಂಬಾ ನೋವಾಗಿದೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅಪಘಾತದಲ್ಲಿ ಗಾಯಗೊಂಡವರನ್ನು ಚೋಟಿ ಸದ್ರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಉದಯ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹೇಳಿದ್ದಾರೆ.
Advertisement
Rajasthan: At least 10 people died after they were run over by a truck on Pratapgarh-Jaipur Highway in Ambawali Village of Pratapgarh district, earlier tonight. pic.twitter.com/FS8zTtNDDQ
— ANI (@ANI) February 18, 2019
ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿಸಿದ್ದೇವೆ. ರಾತ್ರಿಯಾದ ಕಾರಣ ಟ್ರಕ್ ಚಾಲಕನಿಗೆ ಮದುವೆ ಮೆರವಣಿಗೆ ಕಾಣಿಸಲಿಲ್ಲ ಎಂದು ಡಿಎಸ್‍ಪಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv