ಸ್ಯಾಂಟಿಯಾಗೊ: ಚಿಲಿ (Chile) ರಾಜಧಾನಿ ಸ್ಯಾಂಟಿಯಾಗೊದಿಂದ ದಕ್ಷಿಣಕ್ಕೆ ಸುಮಾರು 500 ಕಿ.ಮೀ ದೂರದಲ್ಲಿರುವ ಬಯೋಬಿಯೊದಲ್ಲಿನ (Biobio) ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು (Wildfires) ಕಾಣಿಸಿಕೊಂಡು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ.
Advertisement
ಲಾ ಅರೌಕಾನಿಯಾದ ದಕ್ಷಿಣ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಪೈಲಟ್ ಮತ್ತು ಮೆಕ್ಯಾನಿಕ್ ಸಾವನ್ನಪ್ಪಿದ್ದಾರೆ. ಇದು ಹೆಚ್ಚಿನ ಕಾಡ್ಗಿಚ್ಚು ಅರಣ್ಯ ಪ್ರದೇಶವನ್ನು ಆವರಿಸಲು ಕಾರಣವಾಗಿದೆ. ಒಟ್ಟು 35,000 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯದ ಅಂಚಿನಲ್ಲಿರುವ ಸಾಂತಾ ಜುವಾನಾ (Santa Juana) ನಗರಕ್ಕೂ ಬೆಂಕಿ ವ್ಯಾಪಿಸಿದ್ದು ಈಗಾಗಲೇ ನೂರಾರು ಮನೆಗಳಿಗೆ ಹಾನಿಯಾಗಿದೆ ಎಂದು ಚಿಲಿ ಕೃಷಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೋಶಿಮಠದ ಬಳಿಕ ಜಮ್ಮು-ಕಾಶ್ಮೀರದಲ್ಲೂ ಮನೆ, ರಸ್ತೆಗಳು ಬಿರುಕು
Advertisement
Advertisement
ಬಯೋಬಿಯೊ ಮತ್ತು ನೆರೆಯ ನುಬಲ್‍ನ ಕೃಷಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಕಂಡುಬರುತ್ತದೆ. ಸದ್ಯ ದುರಂತ ನಡೆದಿರುವ ಸ್ಥಳದಲ್ಲಿ ಸೈನಿಕರನ್ನು ನಿಯೋಜಿಸಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ. ಈಗಾಗಲೇ ನೂರಾರು ಮನೆಗಳಿಗೆ ಹಾನಿಯಾಗಿದೆ ಅಲ್ಲಿನ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಸಚಿವ ಕೆರೊಲಿನಾ ತೋಹಾ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕನ್ಯೆ
Advertisement
Wildfire in Chile, more than 7,000 hectares burning, thousands of people evacuated and homes destroyed by fires registered in the Nuble (red alert) and Bío Bío regions of Chile.
TELEGRAM JOIN ???? https://t.co/y6GgaYYYzT pic.twitter.com/yiUHt81tpA
— Disaster News (@Top_Disaster) February 3, 2023
ದುರಂತ ನಡೆದ ಸ್ಥಳದಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಸ್ಥಳೀಯ ದೇಶಗಳಾದ ಬ್ರೆಜಿಲ್ ಮತ್ತು ಅರ್ಜೆಂಟಿನಾದೊಂದಿಗೆ ನೆರವಿನ ಹಸ್ತವನ್ನು ಚಿಲಿ ಕೇಳಿದೆ. 63 ವಿಮಾನಗಳ ಫ್ಲೀಟ್ ಅಗ್ನಿಶಾಮಕವನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k