ಲಕ್ನೋ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ತನ್ನ 13 ತಿಂಗಳ ಮಗುವನ್ನು ಕೊಂದು ನಂತರ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯನ್ನು ಜೀತೆಂದ್ರಿ (23) ಎಂದು ಗುರುತಿಸಲಾಗಿದೆ. ಜೀತೆಂದ್ರಿ ಗಂಡ ರಾಜಸ್ಥಾನದಲ್ಲಿ ಟೈಲರ್ ವೃತ್ತಿಯನ್ನು ನಿರ್ವಹಿಸುತ್ತಿದ್ದು, ಜೀತೆಂದ್ರಿ ಬುಲಂದ್‍ಶಹರ್ ಜಿಲ್ಲೆಯ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಹಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜೀತೆಂದ್ರಿ ತನ್ನ ಮಗುವನ್ನು ಕೊಂದು, ತಾನು ಕತ್ತು ಕೊಯ್ದುಕೊಂಡು ವಿಜಯ್ ನಾಗ್ಲಿಯಾದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಜೀತೆಂದ್ರಿಯ ತಂಗಿ ಕೊಟ್ಟಿರುವ ಹೇಳಿಕೆಯ ಪ್ರಕಾರ, ಮನೆಯ ಛಾವಣಿಯಿಂದ ಯರೋ ಹಾರಿದನ್ನು ಕಂಡು ರೂಮ್ ಬಳಿ ಹೋದಾಗ ಜೀತೆಂದ್ರಿ ಮತ್ತು ಮಗು ರೂಮ್ ಒಳಗೆ ಲಾಕ್ ಹಾಕಿಕೊಂಡಿದ್ದರು. ಬಾಗಿಲು ತೆಗೆಯುವಂತೆ ಕೇಳಿದರು ಬಾಗಿಲು ತೆಗೆಯದೆ ಇದ್ದಾಗ ಡೋರ್ ನ್ನು ಒಡೆದು ಒಳಪ್ರವೇಶಿಸಿದಾಗ ಜೀತೆಂದ್ರಿ ಕತ್ತು ಕುಯ್ದುಕೊಂಡು ಬೆಡ್‍ನಲ್ಲಿ ನರಳುತ್ತಿದ್ದಳು. ಮಗು ಪಕ್ಕದಲ್ಲೇ ಸತ್ತು ಬಿದ್ದಿತ್ತು ಜೀತೆಂದ್ರಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮರಣ ಹೊಂದಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗುವಿನ ಪಕ್ಕದಲ್ಲಿ ವಿಷ ಬೆರೆಸಿದ ಹಾಲಿನ ಬಾಟಲ್ ಪತ್ತೆಯಾಗಿದ್ದು, ಮಗು ಮತ್ತು ಜೀತೆಂದ್ರಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ ಠಾಣೆಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.