ಚಂಡೀಗಢ: ವಿಜ್ಞಾನ ಹಾಗೂ ಆಧುನಿಕತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಆದರೂ ಜನ ಕೆಲವು ಮೂಢನಂಬಿಕೆಗಳಿಂದ ಹೊರಗೆ ಬಂದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಾಂಗಲ್ಯ ದೋಷ ಹೊಂದಿದ್ದ ಟ್ಯೂಷನ್ ಟೀಚರ್ ತನ್ನ ಬಳಿ ಪಾಠ ಕಲಿಯಲು ಬರುತ್ತಿದ್ದ, 13 ವರ್ಷದ ಬಾಲಕನನ್ನು ವಿವಾಹವಾಗಿರುವ ಘಟನೆ ಪಂಜಾಬ್ ಜಲಂಧರ್ನ ಬಸ್ತಿ ಬಾವಾ ಖೇಲ್ ಪ್ರದೇಶದಲ್ಲಿ ನಡೆದಿದೆ. ಮಾಂಗಲ್ಯ ದೋಷ ಹೊಂದಿರುವುದರಿಂದ ಮಹಿಳೆಗೆ ಮದುವೆಯಾಗುತ್ತಿಲ್ಲ ಎಂದು ಆಕೆಯ ಪೋಷಕರು ಆತಂಕಗೊಂಡಿದ್ದರು.
Advertisement
ಒಮ್ಮೆ ಕುಟುಂಬದ ಜ್ಯೋತಿಷಿಯೊಬ್ಬರು ಮಹಿಳೆ ಜಾತಕದಲ್ಲಿ ಮಾಂಗಲ್ಯ ದೋಷವಿರುವುದರಿಂದ ಅವಳು ಮೊದಲಿಗೆ ಅಪ್ರಾಪ್ತ ಹುಡುಗನೊಂದಿಗೆ ಸಾಂಕೇತಿಕವಾಗಿ ವಿವಾಹ ಮಾಡಬೇಕೆಂದು ಸಲಹೆ ನೀಡಿದ್ದರು. ಹೀಗಾಗಿ ಟ್ಯೂಷನ್ ಟೀಚರ್ ಬಾಲಕನ ಪೋಷಕರಿಗೆ ನಿಮ್ಮ ಮಗ ಒಂದು ವಾರ ಟ್ಯೂಷನ್ಗಾಗಿ ನಮ್ಮ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದು ಉಳಿಸಿಕೊಂಡಿದ್ದಾಳೆ. ಬಳಿಕ ಬಾಲಕನೊಂದಿಗೆ ಅಂತಿಮವಾಗಿ ವಿವಾಹವಾಗಿದ್ದಾಳೆ.
Advertisement
Advertisement
ಬಳಿಕ ಮನೆಗೆ ಹಿಂದಿರುಗಿದ ಬಾಲಕ ತನ್ನ ಪೋಷಕರಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಟೀಚರ್ ಮನೆಯವರು ಹಳದಿ- ಮೆಹಂದಿ ಕಾರ್ಯಕ್ರಮ ಮತ್ತು ‘ಸುಹಾಗ್ರಾತ್’ (ಮದುವೆಯ ರಾತ್ರಿ) ಹೀಗೆ ಮದುವೆಯ ಹಲವಾರು ವಿಧಿವಿಧಾನವನ್ನು ಬಲವಂತವಾಗಿ ಮಾಡಿದರು ಎಂದು ಆರೋಪಿಸಿದ್ದಾನೆ. ನಂತರ ಟೀಚರ್ ಕೈ ಬಳೆಗಳನ್ನು ಹೊಡೆದು ವಿಧವೆಯೆಂದು ಘೋಷಿಸಿ, ಸಂತಾಪ ಸಭೆಯನ್ನು ನಡೆಸಿದರು. ಜೊತೆಗೆ ಒಂದು ವಾರ ನನ್ನನ್ನು ಅವರ ಮನೆ ಕೆಲಸ ಮಾಡುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾನೆ.
Advertisement
ಇದರಿಂದ ಬಾಲಕನ ಪೋಷಕರು ಘಟನೆ ಬಗ್ಗೆ ವಿವರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸದ್ಯ ಈ ಕುರಿತಂತೆ ಬಸ್ತಿ ಬಾವಾ ಖೇಲ್ ಪೊಲೀಸ್ ಠಾಣೆಯ ಅಧಿಕಾರಿ ಗಗನ್ದೀಪ್ ಸಿಂಗ್, ಬಾಲಕನ ಪೋಷಕರು ಘಟನೆ ವಿಚಾರವಾಗಿ ದೂರು ದಾಖಲಿಸಿದ್ದು, ಎರಡು ಕಡೆಯವರು ಇದೀಗ ರಾಜಿಯಾಗಿ ದೂರು ಹಿಂಪಡೆದಿದ್ದಾರೆ ಎಂದು ತಿಳಿಸಿದರು.