ಪಟ್ನಾ: ಬಿಹಾರದ ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ರಾಜಕಾರಣಿ ಚಂದ್ರಿಕಾ ಪ್ರಸಾದ್ ರೇ ಅವರ ಹಿರಿಯ ಮಗಳು ಐಶ್ವರ್ಯ ರೇರನ್ನು ಮದುವೆ ಆಗಲಿದ್ದಾರೆ.
ಐಶ್ವರ್ಯ ರೈ ಮತ್ತು ತೇಜ್ ಪ್ರತಾಪ್ ಯಾದವ್ ಅವರ ನಿಶ್ಚಿತಾರ್ಥ ಏಪ್ರಿಲ್ 18 ರಂದು ಪಟ್ನಾದ ಮೌರ್ಯ ಹೋಟೆಲ್ ನಲ್ಲಿ ನಡೆಯಲಿದೆ. ಮೇ 12 ರಂದು ಪಟ್ನಾದ ಪಶು ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆಯಲಿದೆ.
Advertisement
ಐಶ್ವರ್ಯ ರೈ ರನ್ನು ತೇಜ್ ಪ್ರತಾಪ್ ತಾಯಿ ಮಾಜಿ ಮುಖ್ಯ ಮಂತ್ರಿ ರಾಬ್ರಿ ದೇವಿ ಅವರು ಆಯ್ಕೆ ಮಾಡಿರುವುದು ಎಂದು ತಿಳಿದು ಬಂದಿದೆ. ತೇಜ್ ಪ್ರತಾಪ್ ಯಾದವ್ ತಮ್ಮ ಕುಟುಂಬದ ಪರಂಪರೆ ರಾಜಕಾರಣವನ್ನು ಮುಂದುವರೆಸಲಿದ್ದಾರೆ. ರಾಜಕಾರಣದಲ್ಲಿ ಇಲ್ಲಿ ತನಕ ಐಶ್ವರ್ಯ ರೈ ಅವರು ಆಸಕ್ತಿ ತೋರಿಲ್ಲ ಎಂದು ತಿಳಿದು ಬಂದಿದೆ.
Advertisement
2015 ರ ವಿಧಾನಸಭಾ ಚುನಾವಣೆಯಲ್ಲಿ ಮಹುವಾ ಕ್ಷೇತ್ರದಿಂದ ತೇಜ್ ಪ್ರತಾಪ್ ಯಾದವ್ ಗೆದ್ದಿದ್ದರು. ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಆರೋಗ್ಯ, ಜಲ ಸಂಪನ್ಮೂಲ, ಪರಿಸರ ಮತ್ತು ಅರಣ್ಯ ಇಲಾಖೆ ಸಚಿವರಾಗಿದ್ದರು.
Advertisement
29 ವರ್ಷದ, 12ನೇ ತರಗತಿ ಪಾಸಾಗಿರುವ ತೇಜ್ ಪ್ರತಾಪ್ ಯಾದವ್ ನವೆಂಬರ್ 20, 2015 ರಿಂದ ಜುಲೈ 26, 2017 ರ ತನಕ ಸಚಿವರಾಗಿದ್ದರು. ತೇಜ್ ಪ್ರತಾಪ್ ಯಾದವ್ ತನ್ನ ಕಿರಿಯ ತಮ್ಮ ಬಿಹಾರದ ಮಾಜಿ ಉಪ ಮುಖ್ಯ ಮಂತ್ರಿ ತೇಜಾಶ್ವಿ ಯಾದವ್ ಅವರ ಜೊತೆ ಪಕ್ಷವನ್ನು ಮುನ್ನೆಡುಸುತ್ತಿದ್ದಾರೆ. ತಂದೆ ಲಾಲು ಪ್ರಸಾದ್ ಯಾದವ್ ಮೇವು ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
Advertisement
25 ವರ್ಷದ ಐಶ್ವರ್ಯ ರೈ ನೊಟ್ರೆ ಡೇಮ್ ಅಕಾಡೆಮಿ ಪಟ್ನಾದಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನಿಂದ ಇತಿಹಾಸ ಪದವಿಯನ್ನು ಪಡೆದಿದ್ದಾರೆ. ಅಮೇಟಿ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ಐಶ್ವರ್ಯ ಅವರ ತಂದೆ ಅನುಭವಿ ರಾಜಕಾರಣಿ ಚಂದ್ರಿಕಾ ಪ್ರಸಾದ್ ರೈ. ಸಚಿವರಾಗಿ ಹಲವು ಸರ್ಕಾರದ ಜೊತೆ ಕೆಲಸ ಮಾಡಿದ್ದಾರೆ. ಇವರ ತಂದೆ ದರೋಗ ಪ್ರಸಾದ್ ರೈ ಫೆಬ್ರುವರಿ 16, 1970 ರಿಂದ ಡಿಸೆಂಬರ್ 22, 1970 ರ ತನಕ ಬಿಹಾರದ ಮುಖ್ಯ ಮಂತ್ರಿ ಆಗಿದ್ದರು.
ಲಾಲು ಪ್ರಸಾದ್ ಯಾದವ್ ಅವರು ಮದುವೆಯಲ್ಲಿ ಭಾಗವಹಿಸಲು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಇತರೆ ರಾಜ್ಯದ ಕೇಂದ್ರದ ರಾಜಕಾರಣಿಗಳು, ಮುಖಂಡರುಗಳು ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.