ಬೆಳಗಾವಿ: ನಗರದ ಕೆಎಲ್‍ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 12ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಪದಕ ವಿತರಿಸಿದರು.
Advertisement
ಘಟಿಕೋತ್ಸವದಲ್ಲಿ 14ಪಿಎಚ್‍ಡಿ, 10 ಪೋಸ್ಟ್ ಡಾಕ್ಟರಲ್ ಪದವಿ, ವೈದ್ಯಕೀಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ 37 ಚಿನ್ನದ ಪದಕ ವಿತರಿಸಲಾಯಿತು. ಆರೋಗ್ಯ ವಿಜ್ಞಾನ ವಿವಿಧ ವಿಭಾಗಗಳ ಒಟ್ಟು 1,502 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. ಇದರಲ್ಲಿ 494 ಸ್ನಾತಕೋತ್ತರ ಪದವಿ, 909 ಪದವಿ, 11 ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳಿದ್ದಾರೆ. 34ಸರ್ಟಿಫಿಕೇಟ್ ಕೋರ್ಸ್, 8 ಫೆಲೋಶಿಪ್ ಮತ್ತು 22 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡಲಾಯಿತು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ED ಅಧಿಕಾರ ಎತ್ತಿಹಿಡಿದ ಸುಪ್ರೀಂ – ʻಅಪಾಯಕಾರಿ ತೀರ್ಪುʼ ಎಂದ ವಿಪಕ್ಷಗಳು
Advertisement
Advertisement
ಬಳಿಕ ಮಾತನಾಡಿದ ಸಚಿವ ಡಾ.ಅಶ್ವತ್ಥನಾರಾಯಣ, ಪದವಿ ಪಡೆದುಕೊಂಡು ಹೊರಗೆ ಹೋಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಒಳ್ಳೆಯ ಭವಿಷ್ಯವಿದೆ. ತಮ್ಮಲ್ಲಿರುವ ಪ್ರತಿಭೆ ಸಮಾಜದ ಬಡ ಜನರ ಉಪಯೋಗಕ್ಕೆ ಬಳಕೆ ಆಗಬೇಕು. ಕಾಲೇಜು ಜೀವನ ಮುಗಿದ ನಂತರ ನಿಮ್ಮ ನಿಜವಾದ ಜೀವನ ಇನ್ಮುಂದೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳು ನಿಮಗೆ ಎದುರಾಗುತ್ತವೆ. ಆ ವೇಳೆ ನಿಮಗೆ ಕಲಿಸಿದ ಗುರುಗಳನ್ನು ನೆನಪು ಮಾಡಿಕೊಂಡು ಅವರು ಕೊಟ್ಟ ಸಲಹೆ, ಮಾರ್ಗದರ್ಶನದಿಂದ ಒಳ್ಳೆಯ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಲಿ: ಅಶ್ವತ್ಥ್‌ನಾರಾಯಣ ಟಾಂಗ್
Advertisement
ಸಮಾಜಕ್ಕೆ ಕೆಎಲ್‍ಇ ಸಂಸ್ಥೆಯ ಕೊಡುಗೆ ದೊಡ್ಡದಿದೆ. ಕೆಎಲ್‍ಇ ಸಂಸ್ಥೆ ಕೇವಲ ಒಂದೇ ಕ್ಷೇತ್ರಕ್ಕೆ ಸಿಮೀತವಾಗದೇ ಶಿಕ್ಷಣ, ಆರೋಗ್ಯ, ಸಮಾಜಸೇವೆ ಸೇರಿ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇಂತಹ ನಮ್ಮ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅತ್ಯಂತ ಅಭಿಮಾನದಿಂದ ಹಾರಿಸಿ, ಅದಕ್ಕೆ ಸೂಕ್ತ ಗೌರವವನ್ನು ಕೊಡುವ ಕೆಲವನ್ನು ಮಾಡುವಂತೆ ಕರೆ ನೀಡಿದರು.