ಬೆಂಗಳೂರು: ಕೊರೊನಾ ಜನತಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವರ್ಗಗಳಿಗೆ ಚೈತನ್ಯ ತುಂಬುವ ಆರ್ಥಿಕ ನೆರವಿನ ಪ್ಯಾಕೇಜನ್ನು ರಾಜ್ಯ ಸರ್ಕಾರ ಕಡೆಗೂ ಘೋಷಣೆ ಮಾಡಿದೆ.
ರೈತರು, ಕಾರ್ಮಿಕರು, ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯಕ್ಕೆ ಬಿಎಸ್ವೈ ಸರ್ಕಾರ 1,250 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡಿದೆ. ಇಂದು ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ, ಆರ್ಥಿಕ ಪ್ಯಾಕೇಜ್ನ ವಿವರಗಳನ್ನು ನೀಡಿದ್ದಾರೆ.
Advertisement
ಮೇ 24ರವರೆಗಿನ ಜನತಾ ಲಾಕ್ಡೌನ್ ಅವಧಿಯಲ್ಲಿ ರಾಜ್ಯದ ಹಲವು ದುಡಿಯುವ ವರ್ಗಗಳು ಸಂಕಷ್ಟಕ್ಕೆ ತುತ್ತಾಗಿವೆ. ಜನತೆ ಸಂಕಷ್ಟಕ್ಕೆ ಸಿಲುಕಬಾರದು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ವಿವಿಧ ವರ್ಗಗಳಿಗೆ ಈ ನೆರವಿನ ಹಸ್ತ ಚಾಚುತ್ತಿದೆ ಎಂದು ತಿಳಿಸಿದರು. ಈ ವೇಳೆ, ಹಂತ ಹಂತವಾಗಿ ಪ್ಯಾಕೇಜ್ ಘೋಷಣೆ ಮಾಡ್ತೀರಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಈಗ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ.. ಮುಂದಿನ ಹಂತದಲ್ಲಿ ಆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.
Advertisement
Advertisement
ಹೂ ಬೆಳೆಗಾರರಿಗೆ ಏನು..?
* ಪ್ರತಿ ಹೆಕ್ಟೇರ್ ಹಾನಿಗೆ 10,000 ರೂ. ಸಹಾಯ
* 20,000 ರೈತರಿಗೆ ಅನುಕೂಲ ನಿರೀಕ್ಷೆ
* ಸರ್ಕಾರ ಮೀಸಲಿಟ್ಟ ಮೊತ್ತ- 12.73 ಕೋಟಿ ರೂ.
Advertisement
ಹಣ್ಣು, ತರಕಾರಿ ಬೆಳೆಗಾರರಿಗೆ ಏನು..?
* ಒಂದು ಹೆಕ್ಟೇರ್ ಹಾನಿಗೆ 10,000 ರೂ. ನೆರವು
* ಗರಿಷ್ಠ ಒಂದು ಹೆಕ್ಟೇರ್ ಗೆ ಮಾತ್ರ ಸಹಾಯ
* 69,000 ಬೆಳೆಗಾರರಿಗೆ ಅನುಕೂಲ ನಿರೀಕ್ಷೆ
* ಸರ್ಕಾರ ಮೀಸಲಿಟ್ಟ ಮೊತ್ತ- 69 ಕೋಟಿ ರೂ.
ಆಟೋ/ಟ್ಯಾಕ್ಸಿ/ಕ್ಯಾಬ್ ಚಾಲಕರಿಗೆ ಏನು?
* ಪ್ರತಿ ಚಾಲಕನಿಗೆ ತಲಾ 3,000 ರೂ. ನೆರವು
* ಚಾಲಕರು ಲೈಸೆನ್ಸ್, ನೋಂದಣಿ ಹೊಂದಿರಬೇಕು
* 2.10 ಲಕ್ಷ ಚಾಲಕರಿಗೆ ಅನುಕೂಲ ನಿರೀಕ್ಷೆ
* ಸರ್ಕಾರ ಮೀಸಲಿಟ್ಟ ಮೊತ್ತ- 63 ಕೋಟಿ ರೂ.
ಕಟ್ಟಡ ಕಾರ್ಮಿಕರಿಗೆ ಏನು?
* ಕಟ್ಟಡ ಕಾರ್ಮಿಕರಿಗೆ ತಲಾ 3.000 ರೂ. ನೆರವು
* ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೊಂದಾಯಿಸಬೇಕು
* ಸರ್ಕಾರ ಮೀಸಲಿರಿಸಿದ ಮೊತ್ತ- 494 ಕೋಟಿ ರೂ.
ಅಸಂಘಟಿತ ಕಾರ್ಮಿಕರಿಗೆ ಏನು..?
* 3.04 ಲಕ್ಷ ಅಸಂಘಟಿತ ಕಾರ್ಮಿಕರಿಗೆ ತಲಾ 2,000 ರೂ.
* ಕ್ಷೌರಿಕರು, ಅಗಸರು, ಟೈಲರ್ಗಳು
* ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು
* ಅಕ್ಕಸಾಲಿಗರು, ಮೆಕ್ಯಾನಿಕ್ಗಳು, ಕಮ್ಮಾರರು
* ಹಮಾಲಿಗಳು, ಚಮ್ಮಾರರು, ಗೃಹ ಕಾರ್ಮಿಕರಿಗೆ ಆರ್ಥಿಕ ನೆರವು
* ಸರ್ಕಾರ ಮೀಸಲಿಟ್ಟ ಮೊತ್ತ- 60.80 ಕೋಟಿ ರೂ.
ರಸ್ತೆ ಬದಿ ವ್ಯಾಪಾರಿಗಳಿಗೆ ಏನು..?
* ರಸ್ತೆ ಬದಿ ವ್ಯಾಪಾರಿಗಳಿಗೆ ತಲಾ 2000 ರೂ. ನೆರವು
* ಆತ್ಮ ನಿರ್ಭರ ನಿಧಿಯಡಿ ನೋಂದಣಿ ಮಾಡಿಕೊಂಡಿರಬೇಕು
* 2.20 ಲಕ್ಷ ರಸ್ತೆ ಬದಿ ವ್ಯಾಪಾರಿಗಳಿಗೆ ಅನುಕೂಲ ನಿರೀಕ್ಷೆ
* ಸರ್ಕಾರ ಮೀಸಲಿಟ್ಟ ಮೊತ್ತ – 44 ಕೋಟಿ ರೂ.
ಕಲಾವಿದರಿಗೆ ಏನು?
* ಕಲಾವಿದರು, ಕಲಾತಂಡಗಳಿಗೆ ತಲಾ 3,000 ರೂ.
* 16,095 ಕಲಾವಿದರಿಗೆ ಅನುಕೂಲ ನಿರೀಕ್ಷೆ
* ಸರ್ಕಾರ ಮೀಸಲಿಟ್ಟ ಮೊತ್ತ – 4.82 ಕೋಟಿ ರೂ.