ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ (JDS) 23 ಕ್ಷೇತ್ರದಲ್ಲಿ ಮಾತ್ರ ಗೆಲ್ಲುವುದು. ಅವರು 123 ಎಂದು ತಪ್ಪಾಗಿ ಮುಂದೆ ಒಂದನ್ನು ಸೇರಿಸಿದ್ದಾರೆ ಎಂದು ಕಾಂಗ್ರೆಸ್ (Congress) ಶಾಸಕ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆದರೂ ದೇವೇಗೌಡರ (H.D.Deve Gowda) ಮನೆ ಬಾಗಿಲಿಗೆ ಬರಬೇಕು ಎಂದು ಮಾಜಿ ಸಚಿವ ರೇವಣ್ಣ ಹೇಳುತ್ತಾರೆ ಎಂದರೆ ಅವರಿಗೆ ಬಹುಮತ ಬರುವುದಿಲ್ಲ ಎಂದೇ ಅರ್ಥ ಅಲ್ಲವೇ ಎಂದು ಹೇಳಿದ್ದಾರೆ. ಹಾಸನ ಟಿಕೆಟ್ ಫೈಟ್ ಕುರಿತು, ಅವರ ಪಕ್ಷದ ವಿಚಾರವನ್ನು ನಾನು ಮಾತಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಗೆ ಹೈಕಮಾಂಡ್ ಬಹುಪರಾಕ್ – ಸಕ್ಸಸ್ ಆಗುತ್ತಾ ನಮೋ ಗೇಮ್‍ಪ್ಲಾನ್?
ಬಿಜೆಪಿಗೆ (BJP) ರಾಜ್ಯದ ಜನ ಬಹುಮತ ನೀಡಿಲ್ಲ. ಕಳೆದ ಸಲ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಬಂದು 104 ಸ್ಥಾನ ಗೆದ್ದಿದ್ದರು. ಆದರೆ ಈ ಬಾರಿ ಅವರು ಬಂದರೂ ಏನು ಪ್ರಯೋಜನ ಆಗುವುದಿಲ್ಲ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ಸಿಗಲಿದೆ. 150 ಸ್ಥಾನವನ್ನು ಕಾಂಗ್ರೆಸ್ ಪಡೆದರೂ ಅಚ್ಚರಿಪಡಬೇಕಿಲ್ಲ ಎಂದಿದ್ದಾರೆ.
ಉಮ್ರಾಗೆ ಹೊರಟಿದ್ದ ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂ ಹಂಚಿದ್ದೇನೆ. ಅದನ್ನು ಸೌಧಿಗೆ ಹೋಗಿ ಬದಲಾಯಿಸಿಕೊಳ್ಳುವಂತೆ ಹೇಳಿದ್ದೇನೆ. ಅಲ್ಲಿ ಅದರ ಮೌಲ್ಯ 500 ರಿಯಲ್ ಆಗಲಿದೆ. ನೋಟು ಹಂಚಿದ್ದು ಕಾನೂನು ತೊಡಕು ಉಂಟಾಗುವುದಿಲ್ಲ. ಆಶಾಕಾರ್ಯಕರ್ತೆಯರಿಗೆ ಸೂಕ್ತ ಮಾಹಿತಿ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: UK ನಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ- ಬೆಂಗ್ಳೂರಲ್ಲಿ ನೈಜೀರಿಯಾ ಪ್ರಜೆ ಅರೆಸ್ಟ್
Narendra Modi, Congress, BJP, JDS, Amit Shah, H.D.Deve Gowda, B.Z.Zameer Ahmed Khan