ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕ್ರಮೇಣವಾಗಿ ಇಳಿಕೆಯಾಗಿದೆ. ಇಂದು ರಾಜ್ಯದಲ್ಲಿ 12,209 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 320 ಜನ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 2,54,505 ಸಕ್ರಿಯ ಪ್ರಕರಣಗಳಿದ್ದು, ಸೋಂಕು ಹರಡುವಿಕೆ ಪ್ರಮಾಣ ಶೇ.7.71ಕ್ಕೆ ಇಳಿಕೆಯಾಗಿದೆ.
Advertisement
ಇಂದು ಕೊರೊನಾಗೆ 320 ಜನ ಬಲಿಯಾಗಿದ್ದು, ಇದುವರೆಗೂ 31,580 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ ಕೋವಿಡ್ ಪ್ರಮಾಣ ಶೇ.2.62ರಷ್ಟಿದೆ. ಇಂದು 25,659 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 1,58,274 (ರಾಪಿಡ್ ಟೆಸ್ಟ್ 43,233+ಆರ್.ಟಿ. ಪಿಸಿಆರ್ 1,15,041) ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
Advertisement
ಇವತ್ತು ಸಹ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, 2,944 ಜನಕ್ಕೆ ಸೋಂಕು ತಗುಲಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ 187 ಸೋಂಕಿತರು ಸಾವನ್ನಪ್ಪಿದ್ದು, ಸದ್ಯ 1,17,340 ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 10,224 ಜನರು ಗುಣಮುಖರಾಗಿದ್ದಾರೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 166, ಬಳ್ಳಾರಿ 285, ಬೆಳಗಾವಿ 418, ಬೆಂಗಳೂರು ಗ್ರಾಮಾಂತರ 277, ಬೆಂಗಳೂರು ನಗರ 2,944, ಬೀದರ್ 7, ಚಾಮರಾಜನಗರ 247, ಚಿಕ್ಕಬಳ್ಳಾಪುರ 348, ಚಿಕ್ಕಮಗಳೂರು 416, ಚಿತ್ರದುರ್ಗ 266, ದಕ್ಷಿಣ ಕನ್ನಡ 609, ದಾವಣಗೆರೆ 143, ಧಾರವಾಡ 262, ಗದಗ 133, ಹಾಸನ 655, ಹಾವೇರಿ 138, ಕಲಬುರಗಿ 60, ಕೊಡಗು 162, ಕೋಲಾರ 257, ಕೊಪ್ಪಳ 212, ಮಂಡ್ಯ 571, ಮೈಸೂರು 1,237, ರಾಯಚೂರು 104, ರಾಮನಗರ 60, ಶಿವಮೊಗ್ಗ 456, ತುಮಕೂರು 698, ಉಡುಪಿ 494, ಉತ್ತರ ಕನ್ನಡ 360, ವಿಜಯಪುರ 190 ಮತ್ತು ಯಾದಗಿರಿಯಲ್ಲಿ 34 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.