ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇಂದು 12,009 ಕೇಸ್ ದಾಖಲಾಗಿದೆ. ಆದರೆ ದುರ್ದೈವ ಮೈಸೂರಿನಲ್ಲಿ ನಾಲ್ಕು ದಿನದ ಹಸುಗೂಸು ಕೊರೊನಾಗೆ ಬಲಿಯಾಗಿದೆ.
Advertisement
ರಾಜ್ಯದಲ್ಲಿ ಇಂದು ಒಟ್ಟು 50 ಮರಣ ಪ್ರಕರಣ ದಾಖಲಾಗಿದೆ. ಈ ಮರಣ ಪ್ರಕರಣದಲ್ಲಿ ನಾಲ್ಕು ದಿನದ ಮಗು ತೀವ್ರ ಉಸಿರಾಟದ ತೊಂದರೆಯಿಂದ ಬಲಿಯಾಗಿರುವುದಾಗಿ ವರದಿಯಾಗಿದೆ. ಪಾಸಿಟಿವಿಟಿ ರೇಟ್ 9.04%ಕ್ಕೆ ಇಳಿಕೆ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,09,203 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 4,532 ಹೊಸ ಕೇಸ್ ಪತ್ತೆಯಾಗಿದ್ದು, ಇಂದು ಕೂಡ 15 ಮರಣ ಪ್ರಕರಣ ದಾಖಲಾಗಿದೆ. ನಿನ್ನೆ ಕೂಡ 15 ಮರಣ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕೃಷಿ ವಲಯವನ್ನು ರಕ್ಷಿಸಲು, ಬಲಪಡಿಸಲು ಡಿಜಿಟಲ್ ಕೃಷಿ, ಹವಾಮಾನ ಕ್ರಮ: ಮೋದಿ
Advertisement
Advertisement
ರಾಜ್ಯದಲ್ಲಿ ಒಟ್ಟು 25,854 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 38,87,733 ಮಂದಿಗೆ ಕೊರೊನಾ ಬಂದಿದೆ. ಒಟ್ಟು 37,39,197 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.41% ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 2,50,422 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,32,796 ಸ್ಯಾಂಪಲ್ (ಆರ್ಟಿಪಿಸಿಆರ್ 1,01,106 + 31,690 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಹಿಜಬ್ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಮಾತ್ರ ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಬಾಗಲಕೋಟೆ 122, ಬಳ್ಳಾರಿ 481, ಬೆಳಗಾವಿ 1,028, ಬೆಂಗಳೂರು ಗ್ರಾಮಾಂತರ 129, ಬೆಂಗಳೂರು ನಗರ 4,532, ಬೀದರ್ 93, ಚಾಮರಾಜನಗರ 186, ಚಿಕ್ಕಬಳ್ಳಾಪುರ 99, ಚಿಕ್ಕಮಗಳೂರು 66, ಚಿತ್ರದುರ್ಗ 436, ದಕ್ಷಿಣ ಕನ್ನಡ 252, ದಾವಣಗೆರೆ 82, ಧಾರವಾಡ 303, ಗದಗ 61, ಹಾಸನ 413, ಹಾವೇರಿ 171, ಕಲಬುರಗಿ 297, ಕೊಡಗು 373, ಕೋಲಾರ 132, ಕೊಪ್ಪಳ 129, ಮಂಡ್ಯ 275, ಮೈಸೂರು 763, ರಾಯಚೂರು 150, ರಾಮನಗರ 98, ಶಿವಮೊಗ್ಗ 419, ತುಮಕೂರು 342, ಉಡುಪಿ 202, ಉತ್ತರ ಕನ್ನಡ 217, ವಿಜಯಪುರ 126 ಮತ್ತು ಯಾದಗಿರಿಯಲ್ಲಿ 32 ಪಾಸಿಟಿವ್ ಪ್ರಕರಣ ದಾಖಲಾಗಿದೆ.