ಪಾಕ್‍ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ

Public TV
2 Min Read
1200 Year Old Hindu

ಇಸ್ಲಾಮಾಬಾದ್: ಸುದೀರ್ಘ ನ್ಯಾಯಾಲಯದ ಹೋರಾಟದಲ್ಲಿ ಅಕ್ರಮವಾಗಿ ದೇವಾಲಯ ವಶ ಪಡಿಸಿಕೊಂಡಿದ್ದವರನ್ನು ಹೊರಹಾಕಲಾಗಿದೆ. ಪರಿಣಾಮ ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ 1,200 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನಃಸ್ಥಾಪಿಸಲಾಗುವುದು ಎಂದು ದೇಶದ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲ್ವಿಚಾರಣೆಯ ಫೆಡರಲ್ ಸಂಸ್ಥೆ ತಿಳಿಸಿದೆ.

ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್(ಇಟಿಪಿಬಿ) ಕಳೆದ ತಿಂಗಳು ಪ್ರಸಿದ್ಧ ಅನಾರ್ಕಲಿ ಬಜಾರ್ ಲಾಹೋರ್ ಬಳಿ ಇರುವ ವಾಲ್ಮೀಕಿ ಮಂದಿರವನ್ನು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆದಿದೆ. ಕೃಷ್ಣ ದೇವಾಲಯದ ಜೊತೆಗೆ, ವಾಲ್ಮೀಕಿ ದೇವಾಲಯವು ಲಾಹೋರ್‌ನಲ್ಲಿರುವ ಏಕೈಕ ಕ್ರಿಯಾತ್ಮಕ ದೇವಾಲಯವಾಗಿದೆ. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್ 

1200 Year Old Hindu 1

ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಳ್ಳುವ ಕ್ರೈಸ್ತ ಕುಟುಂಬ ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜಾತಿಯ ಹಿಂದೂಗಳಿಗೆ ಮಾತ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡುತ್ತಿತ್ತು ಎಂಬುದು ತಿಳಿದುಬಂದಿದೆ. ಅದನ್ನು ಸಾರ್ವಜನಿಕವಾಗಿಸಲು ಇಟಿಪಿಬಿ ವಶಕ್ಕೆ ಪಡೆದುಕೊಂಡಿದೆ.

ದೇವಾಲಯವನ್ನು ಹಿಂಪಡೆದ ನಂತರ ಇಟಿಪಿಬಿ ವಕ್ತಾರ ಅಮೀರ್ ಹಶ್ಮಿ ಕುರಿತು ಮಾತನಾಡಿದ್ದು, ಮುಂದಿನ ದಿನಗಳಲ್ಲಿ ‘ಮಾಸ್ಟರ್ ಪ್ಲಾನ್’ ಪ್ರಕಾರ ವಾಲ್ಮೀಕಿ ದೇವಾಲಯವನ್ನು ಪುನಃಸ್ಥಾಪಿಸಲಾಗುವುದು. 100ಕ್ಕೂ ಹೆಚ್ಚು ಹಿಂದೂಗಳು, ಕೆಲವು ಸಿಖ್ ಮತ್ತು ಕ್ರಿಶ್ಚಿಯನ್ ನಾಯಕರು ಇಂದು ವಾಲ್ಮೀಕಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಹಿಂದೂಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಿದರು. ಇಪ್ಪತ್ತು ವರ್ಷಗಳ ಹಿಂದೆ ಕ್ರಿಶ್ಚಿಯನ್ ಕುಟುಂಬ ದೇವಾಲಯವನ್ನು ವಶಪಡಿಸಿಕೊಂಡಿತ್ತು ಎಂದು ವಿವರಿಸಿದರು.

ದೇವಸ್ಥಾನದ ಭೂಮಿಯನ್ನು ಕಂದಾಯ ದಾಖಲೆ ಇಟಿಪಿಬಿಗೆ ವರ್ಗಾಯಿಸಲಾಗಿದೆ. ಆದರೆ ಕುಟುಂಬ, 2010-2011 ರಲ್ಲಿ ದೇವಾಲಯ ಇರುವ ಜಾಗದ ಮಾಲೀಕ ನಾವು ಎಂದು ಹೇಳಿಕೊಂಡು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಈ ಕುಟುಂಬವು ವಾಲ್ಮೀಕಿ ಹಿಂದೂಗಳಿಗೆ ಮಾತ್ರ ದೇವಾಲಯವನ್ನು ಮಾಡಿದ್ದೇವೆ ಎಂದಿದ್ದರು. ಆದರೆ ಅವರು ಕೊಟ್ಟಿರುವ ದಾಖಲೆಗಳು ನಕಲಿ ಎಂದು ತಿಳಿದು ನ್ಯಾಯಾಲಯವು ಛೀಮಾರಿ ಹಾಕಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಯಾರಿಗೆ ಬೇಕು ‘ಚಿಕನ್ ಕಥಿ ರೋಲ್’ – ಮನೆಯಲ್ಲಿ ಟ್ರೈ ಮಾಡಿ 

1200 Year Old Hindu 2

ಹಿನ್ನೆಲೆ:
1992 ರಲ್ಲಿ, ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಕೋಪಗೊಂಡ ಜನಸಮೂಹವು ಶಸ್ತ್ರಾಸ್ತ್ರಗಳನ್ನು ಹಿಡಿದ ವಾಲ್ಮೀಕಿ ದೇವಾಲಯಕ್ಕೆ ನುಗ್ಗಿತು. ಕೃಷ್ಣ ಮತ್ತು ವಾಲ್ಮೀಕಿ ವಿಗ್ರಹಗಳನ್ನು ಒಡೆದು, ಅಡುಗೆಮನೆಯಲ್ಲಿದ್ದ ಪಾತ್ರೆಗಳು ಒಡೆದು, ಪ್ರತಿಮೆಗಳನ್ನು ಅಲಂಕರಿಸಿದ ಚಿನ್ನವನ್ನು ವಶಪಡಿಸಿಕೊಂಡರು. ದೇವಾಲಯವನ್ನು ಕೆಡವಿ, ಕಟ್ಟಡಕ್ಕೆ ಬೆಂಕಿ ಹಚ್ಚಲಾಯಿತು. ಪರಿಣಾಮ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿತ್ತು.

ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದ ಸಿಖ್ಖರು ಮತ್ತು ಹಿಂದೂಗಳು ಬಿಟ್ಟುಹೋದ ದೇವಾಲಯಗಳು ಮತ್ತು ಭೂಮಿಯನ್ನು ಇಟಿಪಿಬಿ ನೋಡಿಕೊಳ್ಳುತ್ತದೆ. ಇದು ಪಾಕಿಸ್ತಾನದಾದ್ಯಂತ 200 ಗುರುದ್ವಾರಗಳು ಮತ್ತು 150 ದೇವಾಲಯಗಳನ್ನು ನೋಡಿಕೊಳ್ಳುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *