ಪಾಟ್ನಾ: ಸೈಕಲಿನಲ್ಲಿಯೇ ಮಗಳೊಂದಿಗೆ 1,200 ಕಿ.ಮೀ ಕ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.
ಮೋಹನ್ ಪಾಸ್ವಾನ್ ಅವರು ಸೋಮವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ದರ್ಭಾಂಗ ಜಿಲ್ಲೆಯಲ್ಲಿರುವ ಪಾಸ್ವಾನ್ ಮನೆಯಲ್ಲಿಯೇ ಮೋಹನ್ ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
1,200 ಕಿ.ಮೀ ಕ್ರಮಿಸಿ ಧೈರ್ಯ ಮೆರೆದಿದ್ದ ಬಾಲಕಿ:
ಕಳೆದ ವರ್ಷ ಲಾಕ್ಡೌನ್ನಿಂದಾಗಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯನ್ನು ಸೈಕಲಿನಲ್ಲಿ ಕೂರಿಸಿಕೊಂಡು 1,200 ಕಿ.ಮೀ ಕ್ರಮಿಸಿ ಧೈರ್ಯ ಮೆರೆದಿದ್ದಳು. ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲಿನಲ್ಲಿ ಕ್ರಮಿಸಿದ ಜ್ಯೋತಿ, ಈ ಮಧ್ಯೆ ಹಲವು ಏಳು- ಬೀಳುಗಳನ್ನು ಎದುರಿಸಿಕೊಂಡು ತನ್ನ ತಂದೆಯ ಜೊತೆ ಕೊನೆಗೂ ಊರು ಸೇರಿದ್ದಳು. 2020ರ ಮೇ 10ರಂದು ಜ್ಯೋತಿ ದೆಹಲಿಯಿಂದ ಹೊರಟಿದ್ದಳು. ಈ ವೇಳೆ ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಜ್ಯೋತಿ ಅಪ್ಪ ಕುಳಿತಿದ್ದರು. ಇದನ್ನೂ ಓದಿ: ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ
Advertisement
Advertisement
ನಾವು ತುಂಬಾನೇ ಬಡವರಾಗಿದ್ದು, ನಮ್ಮ ಕೈಯಲ್ಲಿ ಅಲ್ಪ-ಸ್ವಲ್ಪ ಹಣವಿತ್ತು. ಬಾಡಿಗೆ ಮನೆಯಲ್ಲಿದ್ದ ನಮ್ಮನ್ನ ಮಾಲೀಕ ಒಂದಾ ನೀವು ಹಣ ಪಾವತಿಸಬೇಕು, ಇಲ್ಲವೆಂದಲ್ಲಿ ಮನೆ ಖಾಲಿ ಮಾಡಬೇಕು ಎಂದು ಗದರಿದ್ದಾನೆ. ಇದು ನಮ್ಮನ್ನ ಹತಾಶರನ್ನಾಗಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಹಳ್ಳಿಗೆ ವಾಪಸ್ ಹೋಗಲು ನಿರ್ಧರಿಸಿದ್ದು, ಟ್ರಕ್ ಚಾಲಕನ ಬಳಿ ನಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡೆವು. ಆಗ ಆತ 6,000 ನೀಡಬೇಕು ಎಂದು ತಿಳಿಸಿದನು. ಆದರೆ ಆತನಿಗೆ ಹಣ ಕೊಡುವಷ್ಟು ನಮ್ಮ ಬಳಿ ಹಣವಿರಲಿಲ್ಲ. ಹೀಗಾಗಿ ನನ್ನ ತಂದೆ 500 ರೂ. ನೀಡಿ ಒಂದು ಸೈಕಲ್ ಖರೀದಿಸಿದ್ದು, ಅದರಲ್ಲೇ ದರ್ಭಾಂಗಕ್ಕೆ ತಲುಪಿದೆವು ಎಂದು ಜ್ಯೋತಿ ಕುಮಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಳು.
ಜ್ಯೋತಿಯ ತಂದೆ ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿದ್ದರು. ಆದರೆ ಮಾರ್ಚ್ 25ರಿಂದ ಲಾಕ್ ಡೌನ್ ಹೇರಲಾದ ಪರಿಣಾಮ ತನ್ನ ಬಳಿಯಿದ್ದ ರಿಕ್ಷಾವನ್ನು ಮಾಲೀಕನಿಗೆ ಕೊಟ್ಟಿದ್ದಾರೆ. ಆ ನಂತರ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದರು. ಇದನ್ನೂ ಓದಿ: ಊರಿಗೆ ತೆರಳಲೆಂದು 1,200 ಕಿ.ಮೀ ಪ್ರಯಾಣಿಸಿದ ನಂತ್ರ ಕೈ ಕೊಡ್ತು ಅದೃಷ್ಟ
ಮೊದಲೇ ಕಾಲು ನೋವಿನಿಂದ ಬಳಲುತ್ತಿದ್ದ ಜ್ಯೋತಿ ತಂದೆಗೆ ನಡೆದಾಡಲು ಕಷ್ಟವಾಗುತ್ತಿತ್ತು. ಅವರ ಬಳಿ 600 ರೂ. ಮಾತ್ರ ಇತ್ತು. ದಾನಿಗಳ ನೆರವಿನಿಂದ ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಮೂಲಕ ದಿನಕಳೆಯುತ್ತಿದ್ದೆವು ಎಂದಿದ್ದಳು.
लॉकडाउन था, सो अपने पिता को साइकिल पर बैठाकर गुरुग्राम से दरभंगा ले गई बेटी…
वीडियो: मोहन भारद्वाज और सीटू तिवारी pic.twitter.com/Mc7hkmyB4O
— BBC News Hindi (@BBCHindi) May 19, 2020