ಬಾಗಲಕೋಟೆ: ಜಿಲ್ಲೆಯಲ್ಲಿ ಕಬ್ಬು (Sugarcane) ಬೆಳೆಯ ಕಟಾವು ಕಾರ್ಯ ಜೋರಾಗಿ ಸಾಗುತ್ತಿದ್ದು ಮುಧೋಳದಲ್ಲಿ ಕಬ್ಬು ಕಟಾವು ಮಾಡುವ ಜೈ ಹನುಮಾನ್ ಕಬ್ಬಿನ ತಂಡದ ಕಾರ್ಮಿಕರು (Workers) ವಿಶಿಷ್ಟ ಸಾಹಸ ಮರೆದು ಸುದ್ದಿಯಾಗಿದ್ದಾರೆ.
ಕೇವಲ 13 ಗಂಟೆಯೊಳಗೆ ಮೂರು ಎಕರೆ ಕಬ್ಬು ಕಟಾವು ಮಾಡಿ, ಅದನ್ನ ಟ್ರ್ಯಾಕ್ಟರ್ ಗೆ ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್ ಬುಕ್ ಮಾಡಬಹುದು!
ಮುಧೋಳ ತಾಲೂಕಿನ ಹುಣಸಿಗುದ್ದಿ ತೋಟದ ಮನೆಯ ಬಳಿಯ ನಾಗಪ್ಪ ಮಾವಿನಮರ ಎಂಬುವರ ಹೊಲದಲ್ಲಿ ಕಾರ್ಮಿಕರು ಕೇವಲ 13 ಗಂಟೆಯಲ್ಲಿ 120 ಟನ್ ಕಬ್ಬು ಕಡಿದಿದ್ದಾರೆ. ಅಷ್ಟೇ ಅಲ್ಲದೇ ಈ ಅವಧಿಯ ಒಳಗಡೆ ಲೋಡ್ ಸಹ ಮಾಡಿದ್ದಾರೆ.
ಜೈ ಹನುಮಾನ್ ತಂಡದ ಕಾರ್ಮಿಕರ ವಿಶಿಷ್ಟ ಸಾಹಸಕ್ಕೆ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ.