– ಹೂ, ಹಣ್ಣುಗಳ ದರದಲ್ಲಿ ಏರಿಕೆ
ಬೆಂಗಳೂರು: ಈ ವರ್ಷದ ಮೊದಲ ಸುಗ್ಗಿ ಸಂಕ್ರಾಂತಿ ಹಬ್ಬಕ್ಕೆ ಇನ್ನೆರಡೇ ದಿನ ಬಾಕಿ ಇರೋದು. ಹಬ್ಬದ ಸಿದ್ಧತೆ ಸಿಲಿಕಾನ್ ಸಿಟಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಕೆ.ಆರ್ ಮಾರುಕಟ್ಟೆಗೆ ಸಂಕ್ರಾಂತಿ ಹಬ್ಬದ ಆಕರ್ಷಣೆ ಕಬ್ಬು ಲಗ್ಗೆ ಇಟ್ಟಿದೆ.
ಹೌದು. ಬುಧವಾರ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸಂಕ್ರಾಂತಿಯ ಸಂಭ್ರಮ ಸಡಗರಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಹಿಂದೂಗಳ ಯಾವುದೇ ಹಬ್ಬವಾಗಲಿ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲದ ಜೊತೆ ಕಬ್ಬು, ಕಡಲೇಕಾಯಿ ಗೆಣಸು ಮತ್ತು ಅವರೇಕಾಯಿ ಇರಲೇಬೇಕು. ಮುಂಚೆ ಮನೆಯಲ್ಲೇ ಎಳ್ಳು-ಬೆಲ್ಲ ಬೆರೆಸಿ ಹಂಚುವ ಪದ್ಧತಿ ಇತ್ತು. ಆದರೆ ಇಂದಿನ ಬ್ಯುಸಿ ಲೈಫ್ ನಲ್ಲಿ ಸಿಲಿಕಾನ್ ಸಿಟಿಯ ಮಂದಿಗೆ ರೆಡಿಮೆಡ್ ಎಳ್ಳು-ಬೆಲ್ಲದ ಪ್ಯಾಕೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.
Advertisement
Advertisement
ಸಂಕ್ರಾಂತಿ ಹಬ್ಬಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದೆ 120 ಟನ್ ಕಬ್ಬು:
ಕಬ್ಬು – ಜೊಡಿ ಜೊಲ್ಲೆಗೆ – 120 ರಿಂದ 140
ಕಡಲೇಕಾಯಿ ಕೆಜಿಗೆ – 80 ರಿಂದ 100
ಅವರೇಕಾಯಿ ಕೆಜೆಗೆ – 30 ರಿಂದ 60
ಗೆಣಸು ಕೆಜಿಗೆ – 20 ರಿಂದ 40
Advertisement
ಇವು ಸಂಕ್ರಾಂತಿಗೆ ಬೇಕೇಬೇಕಾದ ಪದಾರ್ಥಗಳ ಬೆಲೆ. ಹಬ್ಬ ಅಂದರೆ ಹೂವು ಬೇಕೇ ಬೇಕು. ಹೀಗಾಗಿ ಹೂವಿನ ಬೆಲೆಯೂ ಕೊಂಚ ಏರಿಕೆಯಾಗಿದೆ. ಇದನ್ನೂ ಓದಿ; ಉಚಿತ ಕಬ್ಬಿಗಾಗಿ ಕಾದಾಟ – ಮುಗಿಬಿದ್ದು ಕಿತ್ತಾಡಿಕೊಂಡ ಜನ
Advertisement
ಹೂವುಗಳ ಬೆಲೆ ಇಂತಿದೆ:
ಸೇವಂತಿಗೆ- ಮಾರಿಗೆ 80 ರಿಂದ 120 ರೂ.
ಚೆಂಡೂವು- ಮಾರು- 60 ರಿಂದ 100 ರೂ.
ಕನಕಾಂಬರ- ಕೆಜಿಗೆ 500.ರೂ.
ಬಿಡಿ ರೋಜಾ ಹೂ- ಕೆಜಿಗೆ 150 ರೂ.
ಮಲ್ಲಿಗೆ- ಕೆಜಿಗೆ 800 ರೂ.
ಹಣ್ಣುಗಳ ದರ:
ಸೇಬು- 120 ರೂ.
ಮೂಸಂಬಿ- 100 ರೂ.
ದಾಳಿಂಬೆ- 120 ರೂ.
ಕಿತ್ತಳೆ ಹಣ್ಣು- 80 ರೂ.
ದ್ರಾಕ್ಷಿ- 120 ರೂ.
ಸಪೋಟ- 80 ರೂ.
ಹಬ್ಬಕ್ಕಾಗಿ ಬೆಲೆ ಕೊಂಚ ಏರಿಕೆಯಾಗಿದೆ. ನಾಳೆ ಬೆಲೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆಗಳಿವೆ. ಹಬ್ಬ ಬುಧವಾರ ಇರೋದ್ರಿಂದ ಇವತ್ತೇ ಖರೀದಿ ಮಾಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯ ಕಡೆ ಬರುತ್ತಿದ್ದಾರೆ. ಈ ಬಗ್ಗೆ ಗ್ರಾಹಕರು ಮಾತನಾಡಿ, ಹಬ್ಬ ಅಂದ್ಮೇಲೆ ಬೆಲೆ ಜಾಸ್ತಿ ಆಗ್ತಿರುತ್ತದೆ. ಹಬ್ಬ ಮಾಡ್ಲೇಬೇಕು ಅಂದ್ಮೇಲೆ ಎಷ್ಟೇ ಬೆಲೆ ಆದರೂ ಕೊಂಡುಕೊಳ್ಳಲೇಬೇಕು ಎಂದು ಹೇಳುತ್ತಾರೆ.