ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಟೂರ್ನಿಯಲ್ಲಿ ಸತತ 3 ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್, ನಾನು ನಿಮಗೆ 120 ಶತಕಗಳ ಟಾರ್ಗೆಟ್ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕೊಹ್ಲಿಗೆ ಶುಭಕೋರಿ ಟ್ವೀಟ್ ಮಾಡಿರುವ ಅಖ್ತರ್, ವಿರಾಟ್ ಏಕದಿನ ಕ್ರಿಕೆಟ್ನಲ್ಲಿ ಸತತವಾಗಿ ಗುವಾಹತಿ, ವಿಶಾಖಪಟ್ಟಣ, ಪುಣೆಯಲ್ಲಿ ಶತಕ ಸಿಡಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ರನ್ ಮಿಷನ್ ಕೊಹ್ಲಿಗೆ ನಾನು 120 ಶತಕಗಳ ಟಾರ್ಗೆಟ್ ಅನ್ನು ನೀಡುತ್ತಿದ್ದೇನೆ ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
Guwahati. Visakhapatnam. Pune.
Virat Kohli is something else man with three ODI hundreds in a row, the first India batsman to achieve that .. what a great run machine he is ..
Keep it up cross 120 hundred mark as I set up for you ..
— Shoaib Akhtar (@shoaib100mph) October 27, 2018
ಪುಣೆಯ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ ತವರು ನೆಲದಲ್ಲಿ ಬಾರಿಸಿದ ಸತತ 4ನೇ ಶತಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ವಿಂಡೀಸ್ ವಿರುದ್ಧ ಸರಣಿಯಲ್ಲಿ 397 ರನ್ ಸಿಡಿಸಿದ್ದು, ಒಮ್ಮೆ ಮಾತ್ರ ಔಟಾಗಿದ್ದಾರೆ. ಕೊಹ್ಲಿ ವೃತ್ತಿ ಜೀವನದ 38ನೇ ಶತಕವಾಗಿದ್ದು, ಏಕದಿನ ಪಂದ್ಯಗಳಲ್ಲಿ ಸತತ 4 ಶತಕ ಬಾರಿಸಿರುವ ರೆಕಾರ್ಡ್ ಸದ್ಯ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ಹೆಸರಲ್ಲಿದೆ. ಸಂಗಕ್ಕಾರ 2015ರಲ್ಲಿ ಈ ಸಾಧನೆ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv