ಮುಂಬೈ: ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಾಲಿವುಡ್‍ನಲ್ಲಿ ಟ್ರೆಂಡಿಂಗ್ ಸುದ್ದಿಯಾಗಿದೆ. ಜೋಡಿಗಳ ಮದುವೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಸೆಲೆಬ್ರಿಟಿಗಳ ಮದುವೆಗೆ ಕೋವಿಡ್ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಅಧಿಕಾರಿಗಳು ಹಲವಾರು ನಿಯಮಗಳನ್ನು ವಿಧಿಸಿದ್ದಾರೆ.
ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ನಡೆಯಲಿರುವ ಸೆಲೆಬ್ರಿಟಿ ಜೋಡಿಗಳ ವಿವಾಹದಲ್ಲಿ ಕೇವಲ 120 ಸಂಪೂರ್ಣ ಲಸಿಕೆಯನ್ನು ಪಡೆದಿರುವ ಅತಿಥಿಗಳಿಗಷ್ಟೇ ಆಹ್ವಾನ ನೀಡಲಾಗಿದೆ. ಕೋವಿಡ್-19 ಪ್ರೋಟೋಕಾಲ್‍ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದರೊಂದಿಗೆ, ಲಸಿಕೆ ಹಾಕಿಸದವರು ಆರ್‍ಟಿ-ಪಿಸಿಆರ್ ಪರೀಕ್ಷೆ ನಡಸದೇ ವಿವಾಹದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸವಾಯಿ ಮಧೋಪುರ್ ಡಿಸಿ ರಾಜೇಂದ್ರ ಕಿಶನ್ ತಿಳಿಸಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ
Advertisement
Advertisement
ಜನಸಂದಣಿ ನಿಯಂತ್ರಣ, ಸುಗಮ ಸಂಚಾರ, ಕಾನೂನು ಸುವ್ಯವಸ್ಥೆ ಮತ್ತು ವಿಐಪಿ ಸಂಚಾರಕ್ಕೆ ವ್ಯವಸ್ಥೆ ಮಾಡಲು ಶುಕ್ರವಾರ ಜಿಲ್ಲಾಧಿಕಾರಿ ಪೊಲೀಸ್, ಅರಣ್ಯ, ಹೋಟೆಲ್ ಮತ್ತು ಈವೆಂಟ್ ಮ್ಯಾನೇಜರ್‌ಗಳ ಸಭೆಯನ್ನು ಕರೆಯಲಾಗಿತ್ತು. ವಿವಿಧ ಏಜೆನ್ಸಿಗಳ ನಡುವೆ ಹೊಂದಾಣಿಕೆ ಸಂಬಂಧ ಈ ಸಭೆಯನ್ನು ಆಯೋಜಿಸಲಾಗಿತ್ತು. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಸೀಕ್ರೆಟ್ ಕೋಡ್- ಯಾರ‍್ಯಾರಿಗೆ ಆಹ್ವಾನ?
Advertisement
Advertisement
ಮದುವೆಯ ಸ್ಥಳ ಪಂಚಾಯತ್ ಸಮಿತಿ ಚೌತ್ ಕಾ ಬರ್ವಾರಾದ ಫೋರ್ಟ್ ಬರ್ವಾರದಲ್ಲಿದೆ. ಇದು ಐತಿಹಾಸಿಕ ಕೋಟೆಯಾಗಿದ್ದು, ಹೆರಿಟೇಜ್ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಈ ಸ್ಥಳ ಜಿಲ್ಲಾ ಕೇಂದ್ರದಿಂದ ಸುಮಾರು 22 ಕಿ.ಮೀ. ದೂರದಲ್ಲಿದೆ ಮತ್ತು ಜೈಪುರದಿಂದ ಸುಮಾರು 174 ಕಿ.ಮೀ. ದೂರದಲ್ಲಿದೆ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ವಿವಾಹ – 120 ವ್ಯಾಕ್ಸಿನೇಟೆಡ್ ಅತಿಥಿಗಳಿಗೆ ಮಾತ್ರ ಆಹ್ವಾನ
ಸವಾಯಿ ಮಧೋಪುರ್ ಜಿಲ್ಲೆ ರಣಥಂಬೋರ್ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಹೆಸರುವಾಸಿಯಾಗಿದೆ. ಅತಿಥಿಗಳು ವಿಶೇಷ ಹುಲಿ ಸಫಾರಿಯನ್ನು ಕೂಡಾ ಆನಂದಿಸಲಿದ್ದಾರೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: ಅಪ್ಪು ಅಮೋಘವಾದ ಕನಸಿನ ಪಯಣ ಹಂಚಿಕೊಂಡ ಪತ್ನಿ ಅಶ್ವಿನಿ