ಆನೇಕಲ್: ನಿಯಂತ್ರಣ ತಪ್ಪಿ ಸುಮಾರು 120 ಅಡಿ ಉದ್ದದ ತೇರು ನೆಲಕ್ಕುರುಳಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಹೀಲಲಿಗೆ (Hilalige) ಗ್ರಾಮದಲ್ಲಿ ನಡೆದಿದೆ.
ತೇರು ನೂರಾರು ವರ್ಷಗಳ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಹೋಗುತ್ತಿತ್ತು. ಹತ್ತಾರು ಊರುಗಳಿಂದ ಹುಸ್ಕೂರಿನ ಮದ್ದೂರಮ್ಮ ಜಾತ್ರೆಗೆ ತೇರು ಬರುತ್ತವೆ. ಹೀಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿದ್ದ ತೇರು ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಉರುಳಿಬಿದ್ದಿದೆ. ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ಮುದ್ರೆ ಹೊಂದಿದೆ, ಎಡಪಂಥಿಯರ ಪ್ರಾಬಲ್ಯವಿದೆ – ಮೋದಿ ಆರೋಪ
Advertisement
Advertisement
ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಆಗಮಿಸುತ್ತಿದ್ದ ತೇರು ಎತ್ತುಗಳು ಮತ್ತು ಟ್ರಾಕ್ಟರ್‌ಗಳ ನೆರವಿನಿಂದ ಎಳೆದು ತರಲಾಗುತ್ತಿತ್ತು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಇದನ್ನೂ ಓದಿ: ನಾಲ್ಕೈದು ಲಕ್ಷಕ್ಕೆ ಮಾರಾಟ- ಸಿಬಿಐ ದಾಳಿ ಮಾಡಿ ನವಜಾತ ಶಿಶುಗಳ ರಕ್ಷಣೆ
Advertisement