ವಾಷಿಂಗ್ಟನ್: ಅಮೆರಿಕದಲ್ಲಿ (America) ನಡೆದ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ (National Spelling Bee) 12 ವಯಸ್ಸಿನ ಭಾರತೀಯ-ಅಮೆರಿಕನ್ (Indian-American) ಬಾಲಕ ವಿಜೇತನಾಗಿದ್ದಾರೆ.
ಫ್ಲೋರಿಡಾದಲ್ಲಿರುವ 7ನೇ ತರಗತಿಯ ವಿದ್ಯಾರ್ಥಿ ಬೃಹತ್ ಸೋಮ, ಟೈಬ್ರೇಕರ್‌ನಲ್ಲಿ 29 ಪದಗಳನ್ನು ಸರಿಯಾಗಿ ಉಚ್ಛರಿಸಿದ ನಂತರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಗೆದ್ದಿದ್ದಾರೆ. ಇದನ್ನೂ ಓದಿ: ಟೇಕಾಫ್ ಆಗಲು 20 ಗಂಟೆ ತಡ ಮಾಡಿದ ಏರ್ ಇಂಡಿಯಾ ವಿಮಾನ – ಎಸಿ ಇಲ್ಲದೇ ಮೂರ್ಛೆ ಹೋದ ಪ್ರಯಾಣಿಕರು
Advertisement
Advertisement
ಗುರುವಾರ ನಡೆದ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲಿಂಗ್ ಬೀಯಲ್ಲಿ ಬೃಹತ್ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. 41.74 ಲಕ್ಷ ರೂ. ನಗದು ಮತ್ತು ಇತರ ಬಹುಮಾನಗಳನ್ನು ಗೆದ್ದಿದ್ದಾರೆ. 90 ಸೆಕೆಂಡುಗಳಲ್ಲಿ 29 ಪದಗಳನ್ನು ಸರಿಯಾಗಿ ಉಚ್ಛರಿಸಿದರು. ಮಿಂಚಿನ ಸುತ್ತಿನಲ್ಲಿ 20 ಪದಗಳನ್ನು ಸರಿಯಾಗಿ ಉಚ್ಛರಿಸಿದ ಫೈಜಾನ್ ಝಕಿ ಅವರನ್ನು ಸೋಲಿಸಿದ್ದಾರೆ.
Advertisement
ಬಹೃತ್ ಸೋಮ 2024 ರ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಚಾಂಪಿಯನ್. ನಂಬಲಸಾಧ್ಯವಾದ ಜ್ಞಾಪಕಶಕ್ತಿಯುಳ್ಳ ಹುಡುಗ. 2022 ರಲ್ಲಿ ಹರಿಣಿ ಲೋಗನ್ ಅವರ ಸ್ಟ್ಯಾಂಡಿಂಗ್ ಸ್ಪೆಲ್-ಆಫ್ ದಾಖಲೆಯನ್ನೂ ಮುರಿದಿದ್ದಾರೆ. ಆಗ ಲೋಗನ್ 26ರ ಪೈಕಿ 22 ಪದಗಳನ್ನು ಸರಿಯಾಗಿ ಉಚ್ಛರಿಸಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: ಹಷ್ ಮನಿ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ದೋಷಿ: ಕೋರ್ಟ್ ತೀರ್ಪು
Advertisement
ದಿ ಇ ಡಬ್ಲ್ಯೂ ಸ್ಕ್ರಿಪ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆಡಮ್ ಸಿಮ್ಸನ್ ಅವರು ಬೃಹತ್‌ಗೆ ಚಾಂಪಿಯನ್‌ಶಿಪ್ ಟ್ರೋಫಿ ನೀಡಿದ್ದಾರೆ. ಕೇವಲ 12 ವಯಸ್ಸಿನಲ್ಲೇ ಬೃಹತ್ ಹುಡುಗ ತುಂಬಾ ಜ್ಞಾನ ಹೊಂದಿದ್ದಾನೆ ಎಂದು ಬಣ್ಣಿಸಿದ್ದಾರೆ.