ಭೋಪಾಲ್: ಮೊಬೈಲ್‍ನಲ್ಲಿ ಹಾರರ್ ಧಾರಾವಾಹಿಯನ್ನು ನೋಡಿ 12 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಚಿತ್ರ ಘಟನೆ ಮಧ್ಯಪ್ರದೇಶದ ಛತ್ತರ್‍ಪುರದಲ್ಲಿ ನಡೆದಿದೆ.
ಬಾಲಕಿ ಹಾಗೂ ಆಕೆಯ ತಂಗಿಯನ್ನು ಪೋಷಕರು ಮನೆಯಲ್ಲಿಯೇ ಬಿಟ್ಟು ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಅಕ್ಕ ತಂಗಿ ಸೇರಿ ಮೊಬೈಲ್ ನಲ್ಲಿ ಹಾರರ್ ಧಾರಾವಾಹಿಯನ್ನು ನೋಡಿದ್ದಾರೆ. ಬಳಿಕ ಬಾಲಕಿ ಖಾಲಿ ಬಕೆಟ್ ಮೇಲೆ ನಿಂತು ಟವಲ್ ಮೂಲಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.
Advertisement
Advertisement
ಅಕ್ಕ ನೇಣು ಬಿಗಿದುಕೊಂಡು ಒದ್ದಾಡುತ್ತಿರುವುದನ್ನು ಕಂಡ ತಂಗಿ ಭಯಗೊಂಡು ತನ್ನ ಅಕ್ಕಪಕ್ಕದ ಮನೆಯವರನ್ನು ಸಹಾಯಕ್ಕೆ ಕರೆದಿದ್ದಾಳೆ. ಆಗ ಅವರು ಬಾಲಕಿಯರ ಪೋಷಕರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬರುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಳು.
Advertisement
ಈ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆ ಬಳಿಕ ಪೋಷಕರಿಗೆ ಬಾಲಕಿಯ ಶವವನ್ನು ಹಸ್ತಾಂತರಿಸಲಾಯಿತು.
Advertisement
ಈ ಘಟನೆಯಿಂದ ದೂರದರ್ಶನ ಕಾರ್ಯಕ್ರಮಗಳು ಹಾಗೂ ವೀಡಿಯೊಗಳು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎನ್ನುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಪುಟ್ಟ ಮಕ್ಕಳಿಗೆ ಕಾಲ್ಪನಿಕ ಕಥೆ ಮತ್ತು ವಾಸ್ತವದ ಬಗ್ಗೆ ಇರುವ ವ್ಯತ್ಯಾಸ ತಿಳಿಯುವ ಬುದ್ಧಿಶಕ್ತಿ ಇರುವುದಿಲ್ಲ. ಇದರಿಂದ ಅವರು ಕಾಲ್ಪನಿಕ ಜಗತ್ತನ್ನೇ ನಿಜವೆಂದು ಭಾವಿಸುತ್ತಿರುತ್ತಾರೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.