ಚಿಕ್ಕಮಗಳೂರು: 12 ವರ್ಷದ ಬಾಲಕಿ ಮೇಲೆ 48 ವರ್ಷದ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದ ಏರಿಯಾವೊಂದರಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಯತ್ನಿಸಿದ 48 ವರ್ಷದ ಬಾಷಾ ಕೂಡ ಅದೇ ಏರಿಯಾದವನು. ಮನೆ ಬಳಿಯ ಅಂಗಡಿಗೆ ಹೋಗಿ ಮನೆಗೆ ಬರುತ್ತಿದ್ದ ಬಾಲಕಿಯನ್ನು ತಿಂಡಿ ಕೊಡುತ್ತೇನೆ ಬಾ ಎಂದು ಬಾಷಾ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಖವೇ ಇಲ್ಲದೆ ಹುಟ್ಟಿದ ಕುರಿಮರಿ!
ಅಂಗಡಿಗೆ ಹೋಗಿದ್ದ ಬಾಲಕಿ ಮನೆಗೆ ಬರದಿದ್ದಾಗ, ಬಾಲಕಿಯನ್ನ ಆಕೆಯ ಚಿಕ್ಕಮ್ಮ ಹುಡುಕಿಕೊಂಡು ಹೊರಟಿದ್ದರು. ಈ ವೇಳೆ, ಮನೆಯೊಂದರಲ್ಲಿ ಬಾಲಕಿ ಕೂಗಾಡುವ ಶಬ್ಧ ಕೇಳಿಬಂದಿದೆ. ಶಬ್ಧ ಕೇಳಿ ಬಾಲಕಿಯ ಚಿಕ್ಕಮ್ಮ ಹೋಗಿ ಆಕೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಬಾಲಕಿಯ ಚಿಕ್ಕಮ್ಮ ಆತನ ಮೇಲೆ ಕೂಗಾಡಿದ್ದರಿಂದ ಅಕ್ಕಪಕ್ಕದವರು ಸೇರಿ ಆತನ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಮೊಮ್ಮಗಳ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಸ್ಥಳಿಯರು ಆತನಿಗೆ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಆತನನ್ನ ಸ್ಥಳಿಯರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ತರೀಕೆರೆ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಇದನ್ನೂ ಓದಿ: 8 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕಳ್ಳರು ಅರೆಸ್ಟ್