ತಿರುವನಂತಪುರಂ: ಈಗಾಗಲೇ ಕೋವಿಡ್ 4ನೇ ಅಲೆ ಭಾರತದ ಕೆಲ ರಾಜ್ಯಗಳಿಗೆ ಅಪ್ಪಳಿಸಿದೆ. ಓಮಿಕ್ರಾನ್ ಉಪತಳಿಗಳಾದ ಬಿಎ-1, 2, 3, 4, 5 ತಳಿಗಳು ಸಾವಿರಾರು ಜನರನ್ನು ಬಾದಿಸುತ್ತಿವೆ. ಈ ಬೆನ್ನಲ್ಲೇ ಕೇರಳಕ್ಕೆ ಹಂದಿಜ್ವರ ಮತ್ತೆ ಲಗ್ಗೆಯಿಟ್ಟಿದೆ. ಇಲ್ಲಿನ ಕೋಯಿಕ್ಕೋಡ್‌ನ ಉಲಿಯೇರಿ ಪ್ರದೇಶದಲ್ಲಿ 12 ವರ್ಷದ ಹುಡುಗಿಯೊಬ್ಬರಿಗೆ ಎಚ್1-ಎನ್1 ಹಂದಿಜ್ವರ ಕಾಣಿಸಿಕೊಂಡಿದ್ದು, ನಿನ್ನೆ ಮೃತಪಟ್ಟಿದ್ದಾರೆ.
Advertisement
ಈಚೆಗಷ್ಟೇ ಕೇರಳದ ಈ ಹುಡುಗಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಬೆಂಗಳೂರಿನಿಂದ ಹಿಂದಿರುಗಿದ ಬಳಿಕ ಕೇರಳದ ಕೋಯಿಲಂಡಿ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಎಚ್1-ಎನ್1 ಸೋಂಕು ಇರುವುದು ದೃಢಪಟ್ಟಿತು. ತಕ್ಷಣ ಹುಡುಗಿಯನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ನಿನ್ನೆ ಮೃತಪಟ್ಟಿದ್ದಾಳೆ. ಬಾಲಕಿ ಸಂಪರ್ಕದಲ್ಲಿದ್ದ ಅವಳಿ ಸಹೋದರಿಗೂ ಎಚ್1-ಎನ್1 ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ
Advertisement
Advertisement
1918-1919 ರಲ್ಲಿ ಕಾಣಿಸಿಕೊಂಡಿದ್ದ ಹಂದಿಜ್ವರ ಎಚ್1-ಎನ್1 ಇನ್‌ಫ್ಲುಯೆನ್ಸ್ ವೈರಸ್ 2009 ರಲ್ಲಿ ದೇಶದ ಅನೇಕ ಕಡೆ ವ್ಯಾಪಕವಾಗಿ ಹರಡಿತ್ತು. ಸುಮಾರು 2.84 ಲಕ್ಷ ಜನರನ್ನು ಬಲಿ ಪಡೆದಿತ್ತು. ಇದರಿಂದ ವಿಶ್ವಸಂಸ್ಥೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ಸಮನ್ಸ್
Advertisement
ಬೆಂಗಳೂರಿಗೂ ಆತಂಕ: ಕಳೆದ ಮರ‍್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದರ ಬೆನ್ನಲ್ಲೇ ಕೇರಳದಲ್ಲಿ ಹಂದಿ ಜ್ವರಕ್ಕೆ ಬಲಿಯಾದ ಬಾಲಕಿ ಈಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು ಎಂಬುದು ಅನೇಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರಿನಲ್ಲೂ ಹಂದಿಜ್ವರ ಕಾಣಿಸಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.