ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ದೆಹಲಿ ನಿಜಾಮುದ್ದೀನ್ ತಬ್ಲಿಘಿ ನಂಟು ಹೊಂದಿರುವ ರೋಗಿ- 293ರಿಂದ ರೋಗಿ-524(12 ವರ್ಷ) ಬಾಲಕನಿಗೆ ಕೊರೊನಾ ತಗುಲಿದೆ. ರೋಗಿ- 293ರ ಅಣ್ಣನ ಮಗನ ಮಗ 12 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದಿದೆ.
Advertisement
Advertisement
ಈ ಮೂಲಕ ಒಟ್ಟು ಸಂಕೇಶ್ವರ ಪಟ್ಟಣಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಎರಡಕ್ಕೇರಿದಂತಾಗಿದ್ದು, ಸಂಕೇಶ್ವರ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರೋಗಿ- 293 ದೆಹಲಿಯ ತಬ್ಲಿಘಿ ಜಮಾತ್ ಗೆ ಹೋಗಿ ಬಂದಿರುವ ಕಾರಣ ಈಗಾಗಲೇ ಆತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.
Advertisement
Advertisement
ಈಗಾಗಲೇ ರೋಗಿ-293ರ ಸಂಪರ್ಕದಿಂದ ಬೆಳಗಾವಿಯ ಆಜಾದ ನಗರದಲ್ಲಿರುವ ಮಗಳಿಗೂ (ರೋಗಿ- 418) ಕೊರೊನಾ ತಗಲಿದ್ದು ತಬ್ಲಿಘಿ ನಂಜಿನಿಂದ ರೋಗಿ-293 ರಿಂದ ಮೂರು ಜನರಿಗೆ ಕೊರೊನಾ ತಗುಲಿದಂತಾಗಿದೆ.