ಕಾರವಾರ: ಆಹಾರ ಹುಡುಕಿಕೊಂಡು ಪೊಲೀಸ್ ವಸತಿ ನಿಲಯಕ್ಕೆ ಬಂದಿದ್ದ ಹಾವನ್ನ 12 ವರ್ಷದ ಬಾಲಕ ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನೆಡೆದಿದೆ.
Advertisement
Advertisement
ಅಂಕೋಲದ ಪೊಲೀಸ್ ವಸತಿ ನಿಲಯಕ್ಕೆ ಆಹಾರ ಅರಸಿ ಕೇರೆ ಹಾವೊಂದು ಬಂದಿದ್ದು ಇದರಿಂದಾಗಿ ಹೆದರಿದ ಅಲ್ಲಿನ ನಿವಾಸಿಗಳು ಹಾವನ್ನ ಕೊಲ್ಲಲು ಮುಂದಾಗಿದ್ರು. ಆದ್ರೆ ಇದನ್ನು ನೋಡಿದ 12 ವರ್ಷದ ಬಾಲಕ ಗಗನ್ ಈ ಹಾವನ್ನು ತನ್ನ 10 ವರ್ಷದ ತಂಗಿ ಭೂಮಿಕಾ ಸಹಾಯ ದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾನೆ.
Advertisement
Advertisement
ಹಾವುಗಳು ಎಲ್ಲೇ ಕಂಡರೂ ಅದನ್ನು ಕೊಲ್ಲಬೇಡಿ ರಕ್ಷಿಸಿ ಅಂತ ಜನರಿಗೆ ಕಿವಿಮಾತು ಹೇಳುವ ಮಾಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ ಈ ಪೋರ.