DharwadDistrictsKarnatakaLatestMain Post

ಅಂದು ನಾಯಿ ದಾಳಿಗೆ ಯುವಕ ಬಲಿ – ಅದೇ ಜಾಗದಲ್ಲಿ ಇಂದು ಬಾಲಕ ಬಲಿ

ಧಾರವಾಡ: ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 12 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡ ಹೊರವಲಯದ ನವಲೂರು ರೈಲ್ವೆ ಗೇಟ್ ಬಳಿ ನಡೆದಿದೆ.

ಪ್ರಥಮ ನೀರಲಕಟ್ಟಿ (12) ಸಾವಿಗೀಡಾದ ದುರ್ದೈವಿ. ಶಾಲೆ ರಜೆ ಇದ್ದ ಕಾರಣ ಧಾರವಾಡ ಜಿಲ್ಲೆಯ ದುಮ್ಮವಾಡ ಗ್ರಾಮದಿಂದ ನವಲೂರಿಗೆ ಬಾಲಕ ಬಂದಿದ್ದನು. ತನ್ನ ಅಜ್ಜನಿಗೆ ಊಟ ಕೊಡಲೆಂದು ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ನಾಯಿಗಳ ಹಿಂಡು ಬಾಲಕನ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ರೆ ತಪ್ಪೇನಿಲ್ಲ: ಮುರುಗೇಶ್ ನಿರಾಣಿ

crime

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಬಾಲಕ ಅಸುನೀಗಿದ್ದಾನೆ. ಈ ಹಿಂದೆ ಇದೇ ಜಾಗದಲ್ಲಿ ಓರ್ವ ಯುವಕ ನಾಯಿಗಳ ದಾಳಿಗೆ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ

Leave a Reply

Your email address will not be published.

Back to top button