ಬ್ಲೂವೇಲ್‍ ಆಟಕ್ಕೆ ಬಲಿಯಾದ 12ರ ಬಾಲಕ!

Public TV
1 Min Read
glb suicide collage copy

ಕಲಬುರಗಿ: ನೇಣು ಬಿಗಿದುಕೊಂಡು 12 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಹಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

ಸಮರ್ಥ್(12) ಬ್ಲೂವೇಲ್‍ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಸಮರ್ಥ್ ಬ್ಲೂವೇಲ್ ಗೇಮ್‍ನ ಟಾಸ್ಕ್ ಗೆ ಬಲಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಸಮರ್ಥ್ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದನು. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನದ ಮೊದಲು ಆತ ಏಕಾಂಗಿಯಾಗಿದ್ದನು ಎಂದು ತಿಳಿದು ಬಂದಿದೆ.

glb suicide

ಸಮರ್ಥ್ ಎರಡು ದಿನದ ಮೊದಲು ಮನೆಯಲ್ಲೇ ಬ್ಲೂವೇಲ್ ಗೇಮ್‍ನ ಸಿಡಿಯನ್ನು ತಂದಿದ್ದಾನೆ. ಅಲ್ಲದೇ ಆತ ತನ್ನ ಎರಡು ಕೈಗಳನ್ನು ಕಟ್ಟಿಕೊಳ್ಳೋಕ್ಕೆ ಪ್ರಯತ್ನಿಸುತ್ತಿದ್ದನು. ಪೋಷಕರು ಈ ವಿಷಯದ ಬಗ್ಗೆ ಆತನನ್ನು ಕೇಳಿದ್ದಾಗ ಇದು ಶಾಲೆಯಲ್ಲಿ ಹೇಳಿಕೊಟ್ಟ ಚಟುವಟಿಕೆ ಎಂದು ಸುಳ್ಳು ಹೇಳುತ್ತಿದ್ದನಂತೆ. ಆತನ ಮಾತು ನಿಜವೆಂದು ನಂಬಿ ಪೋಷಕರು ನಿರ್ಲಕ್ಷಿಸಿದ್ದರು.

blue whale game

ಸಮರ್ಥ್ ಎರಡು ದಿನದ ಹಿಂದೆ ತನ್ನ ಹಣದಲ್ಲಿ ವೇಲ್ ಖರೀದಿಸಿದ್ದನು. ಸದ್ಯ ಸಮರ್ಥ್ ಸೋಮವಾರ ಸಂಜೆ ಸುಮಾರು 7 ಗಂಟೆಗೆ ಆಟವಾಡುತ್ತಾ ಹಠ ಮಾಡಿ ತಾಯಿಗೆ ಪಾನಿಪುರಿ ತರಲು ಕಳುಹಿಸಿದ್ದಾನೆ. ಈ ಸಂದರ್ಭದಲ್ಲಿ ಬ್ಲೂವೇಲ್‍ನ ಸಾವಿನ ಟಾಸ್ಕ್ ಎದುರಾಗಿದ್ದು, ಸಮರ್ಥ್ ವೇಲ್ ನನ್ನು ಫ್ಯಾನಿಗೆ ಬಿಗಿದು ನೇಣಿಗೆ ಶರಣಾಗಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಸದ್ಯ ಈ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

blue whale game 2

ಏನಿದು ಬ್ಲೂ ವೇಲ್ ಗೇಮ್?: ಇದು ರಷ್ಯಾ ಮೂಲದ ಭಯಾನಕ ಆನ್ ಲೈನ್ ಆಟವಾಗಿದ್ದು, ಇದನ್ನು ಮಾರಣಾಂತಿಕ ಬ್ಲೂ ವೇಲ್ ಗೇಮ್ ಅಥವಾ ಬ್ಲೂ ವೇಲ್ ಚಾಲೆಂಜ್ ಅಂತನೂ ಕರೆಯುತ್ತಾರೆ. ಈ ಆಟದಲ್ಲಿ ಸಂಗೀತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತವೆ. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯುವುದು ಆಗಿರುತ್ತದೆ. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕು. ನಂತರ ಕಟ್ಟಡದಿಂದ ಹಾರಬೇಕು ಎಂದಾಗಿರುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *