ಗದಗ: 12 ವರ್ಷದ ಪೋರನೊಬ್ಬ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದ್ದಾನೆ.
ಗದಗ ನಗರದ 12 ವರ್ಷದ ಬಾಲಕನ ಹೆಸರು ವಿನಯ್ ಅಕ್ಕಿ. ಈತ 8ನೇ ತರಗತಿ ಒದುತ್ತಿದ್ದು, 6ನೇ ವರ್ಷದಿಂದಲೇ ಬಾಡಿ ಬಿಲ್ಡ್ ಮಾಡೋದಕ್ಕೆ ಪ್ರಾರಂಭಿಸಿದ್ದಾನೆ. ಮೀಸೆ ಚಿಗುರದ ಈ ವಯಸ್ಸಲ್ಲಿ ಜಿಲ್ಲಾ, ರಾಜ್ಯ ಹಾಗೂ ಅಂತರ್ ರಾಜ್ಯಮಟ್ಟದ ಬಾಡಿ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾನೆ. ಅಷ್ಟೇ ಅಲ್ಲ ಕನ್ನಡ ರಾಜ್ಯೋತ್ಸವ, ಗದಗ ಉತ್ಸವ, ಹಂಪಿ ಉತ್ಸವ, ದಸರಾ ಉತ್ಸವ ಸೇರಿದಂತೆ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾನೆ.
Advertisement
Advertisement
ಕಟ್ ಮಸ್ತಾಗಿ ಬಾಡಿ ಬಿಲ್ಡ್ ಮಾಡಿರೋ ಸ್ಪರ್ಧಿಗಳ ನಡುವೆ ಈ 12ರ ಚಿಕ್ಕಪೋರ ದಾಖಲೆ ಬರೆಯಲು ಮುಂದಾಗಿದ್ದಾನೆ. ಕಳೆದ ಒಂದು ವರ್ಷದಿಂದ ದಿನಕ್ಕೆ ನಾಲ್ಕು ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡ್ತಿರೋ ಇತ ಇದನ್ನೆ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ.
Advertisement
Advertisement
ವಿನಯ್ ತಂದೆ ವಿನೋದ್ ಮಾಲೀಕತ್ವದ ಜಿಮ್ ಇರೋದ್ರಿಂದ, ಇದೀಗ ಬಾಲಕನಿಗೆ ತುಂಬಾನೆ ಅನೂಕೂಲಕರವಾಗಿದೆ. ತಂದೆ ಜಿಮ್‍ನಲ್ಲಿ ಇಲ್ಲದ ಸಂದರ್ಭದಲ್ಲಿ ಇವನೇ ಟ್ರೇನರ್ ಆಗಿ ಕೆಲಸ ಮಾಡ್ತಾನೆ. ವಿನಯ್ ಕೇವಲ ಬಾಡಿ ಬಿಲ್ಡಿಂಗ್‍ನಲ್ಲಿ ಅಷ್ಟೇ ಹೆಸರು ಮಾಡದೆ ಮಾರ್ಷಲ್ ಆಟ್ರ್ಸ್, ಕರಾಟೆಯಲ್ಲೂ ಕೂಡ ರಾಷ್ಟಮಟ್ಟದಲ್ಲಿ ಪ್ರತಿನಿಧಿಸಿದ್ದಾನೆ. ಇವೆಲ್ಲದಕ್ಕೂ ತರಬೇತಿ ನೀಡಿರೋ ಇವನ ತಂದೆ ವಿನೋದ್ ಹಾಗೂ ತಾಯಿ ಮಧುರಾ ಇಬ್ಬರು ಇವನಿಗೆ ಸ್ಪೂರ್ತಿಯಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧನೆ ಮಾಡಲು ಮುಂದಾದ ಪೋರನ ಕಾರ್ಯ ನಿಜಕ್ಕೂ ಹೆಮ್ಮೆಪಡುವಂತದ್ದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿರುವುದರಿಂದ ಗದಗ ಜಿಲ್ಲೆಗೆ ಕಿರೀಟ ಬಂದಂತಾಗಿದೆ. ಇನಷ್ಟು ಯಶಸ್ಸಿನ ಹಾದಿ ಸುಲಭವಾಗಲಿ ಎಂಬುದೆ ಎಲ್ಲರ ಹಾರೈಕೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews