ಮಡಿಕೇರಿ: ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಜಿಲ್ಲಾ ಡಿಸಿಸಿ ಬ್ಯಾಂಕ್ ಮತ್ತು ಅದರ ಇತರೆ 13 ಶಾಖೆಗಳಲ್ಲಿ ವಂಚಕರು ನಕಲಿ ಚಿನ್ನವನ್ನು ನೀಡಿ ಬರೋಬ್ಬರಿ 30.66 ಲಕ್ಷ ರೂ. ಸಾಲವನ್ನು ಪಡೆದಿದ್ರು. ಆ ಮೂಲಕ ಬ್ಯಾಂಕ್‌ಗೆ ಪಂಗನಾಮ ಹಾಕಿದ್ದರು. ಅವರಲ್ಲಿ ಓರ್ವನನ್ನು ಪೊಲೀಸರು ಬಂದಿಸಿದ್ದರು. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಡಿಸಿಸಿ ಬ್ಯಾಂಕ್, ವೀರಾಜಪೇಟೆ, ಭಾಗಮಂಡಲ, ಕಡಂಗ ಡಿಸಿಸಿ ಬ್ಯಾಂಕ್ ಶಾಖೆ, ಮಡಿಕೇರಿಯ ಮುತ್ತೂಟ್ ಫಿನ್‌ಕಾರ್ಪ್ ಹಾಗೂ ಭಾಗಮಂಡಲ ವಿಎಸ್‌ಎಸ್‌ಎನ್ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಮೊಹಮ್ಮದ್ ರಿಜ್ವಾನ್, ನವಾಜ್, ಮೊಹಮ್ಮದ್ ಕುಂಞ, ಪ್ರದೀಪ್, ನಿಶಾದ್, ಕೆ.ಪಿ. ನವಾಜ್, ಪಿ.ಹೆಚ್. ರಿಯಾಜ್, ಕುಂಜಿಲದ ಅಬ್ದುಲ್ ನಾಸಿರ್, ಪಡಿಯಾನಿಯ ಬಿ.ಎ. ಮೂಸಾ, ಎಂ.ಎಂ. ಮಹಮ್ಮದ್ ಹನೀಫ್, ಖತೀಜಾ, ಭಾಗಮಂಡಲ ಅಯ್ಯಂಗೇರಿಯ ರ‍್ಹಾನ್, ರಫೀಕ್ ಬಂಧಿತರು. ಮತ್ತೋರ್ವ ಆರೋಪಿ ಹಂಸ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಸೆರೆಗೂ ಬಲೆ ಬೀಸಲಾಗಿದೆ.