– ಸ್ಫೋಟದ ತೀವ್ರತೆಗೆ ವಾಹನ ಸಮೇತ ಸೈನಿಕರ ದೇಹ ಛಿದ್ರ ಛಿದ್ರ
ಇಸ್ಲಾಮಾಬಾದ್: ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆ ವಾಹನದ (Pakistan Army vehicle) ಮೇಲೆ ಬಲೂಚ್ ಲಿಬರೇಶನ್ ಆರ್ಮಿ (BLA) ಐಇಡಿ (ಸುಧಾರಿತ ಸ್ಫೋಟಕ ಸಾಧನ) ದಾಳಿ ನಡೆಸಿದ್ದು, ಪಾಕ್ ಸೇನೆಯ 12 ಮಂದಿ ಪಾಕ್ ಸೈನಿಕರನ್ನು ಹತ್ಯೆ ಮಾಡಿದೆ.
पाकिस्तान की आर्मी पर बलूच लिब्रेशन आर्मी का बड़ा अटैक, 14 पाकिस्तानी सैनिकों के मारे जाने की खबर है। ये वीडियो सोशल मीडिया में सुबह से वायरल है, बताया जा रहा है कि इसे #BLA (बलूचिस्तान लिब्रेशन आर्मी) ने ही जारी किया है। #BalochistanIsNotPakistan #Balochistan… pic.twitter.com/1Kyed6BLpL
— Ajit Singh Rathi (@AjitSinghRathi) May 8, 2025
ಬಲೂಚ್ ಲಿಬರೇಷನ್ ಆರ್ಮಿಯ (Balochistan Liberation Army) ಹೋರಾಟಗಾರರು ಪಾಕ್ ಸೇನಾ ವಾಹನವನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ. ಈ ವೇಳೆ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದಂತೆ ಸೇನಾ ವಾಹನದಲ್ಲಿದ್ದ 12 ಸೈನಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಾಹೋರ್‌ನಲ್ಲಿ ಅಲ್ಲೋಲ ಕಲ್ಲೋಲ – ಮಿಲಿಟರಿ ವಿಮಾನ ನಿಲ್ದಾಣದ ಬಳಿ ಮೂರು ಸ್ಫೋಟ
ಸ್ಫೋಟ ಸಂಭವಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಸ್ಫೋಟದ ತೀವ್ರತೆಗೆ ವಾಹನ ಸಮೇತ ಅದರಲ್ಲಿದ್ದ ಸೈನಿಕರ ದೇಹ ಛಿದ್ರ ಛಿದ್ರವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪಾಕ್ ಸೇನೆ ಬಲೂಚ್ ಹೋರಾಟಗಾರರನ್ನ ಸದೆಬಡಿಯಲು ಪಣ ತೊಟ್ಟಿದೆ. ಇದನ್ನೂ ಓದಿ: ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್ ಸಿಂಧೂರ ಬೆಂಬಲಿಸಿದ ಇಸ್ರೇಲ್
ಒಂದು ವಾರದ ಹಿಂದೆಯಷ್ಟೇ ಬಲೂಚಿಸ್ತಾನ ಪ್ರಾಂತ್ಯದ ಕಚ್ ಮತ್ತು ಜಿಯಾರತ್ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು 10 ಉಗ್ರರನ್ನ ಕೊಂದಿದ್ದವು, ಇದಕ್ಕೆ ಪ್ರತೀಕಾರವಾಗಿ ಬಲೂಚ್ ಉಗ್ರರು ಐಇಡಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Operation Sindoor | ಭಾರತದ ದಾಳಿಯಲ್ಲಿ 31 ಮಂದಿ ಹತ್ಯೆ, 46 ಮಂದಿಗೆ ಗಾಯ – ಹೊಣೆ ಹೊತ್ತ ಪಾಕ್ ಸೇನೆ