ಬಾಗಲಕೋಟೆ: ಜಿಲ್ಲೆಯ ಡಿಸಿಐಬಿ, ನವನಗರ ಠಾಣೆ ಪೊಲೀಸರು ಜಂಟಿ ದಾಳಿ ನಡೆಸಿ ಮನಿ ಡಬ್ಲಿಂಗ್ ಮತ್ತು ಹಳೆ ನೋಟ್ ಎಕ್ಸ್ ಚೇಂಜ್ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. 667 ಕೋಟಿ ಹಳೆ ನೋಟ್ ಬದಲಾವಣೆ ಜಾಲ ಭೇದಿಸಿದ ಡಿಸಿಐಬಿ ಪೊಲೀಸರು ಮತ್ತು ನವನಗರ ಠಾಣೆ ಪೊಲೀಸರು 12 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಒಟ್ಟು 667 ಕೋಟಿ ಹಳೆ ನೋಟ್ ಎಕ್ಸ್ ಚೇಂಜ್ ಗೆ ಆರೋಪಿಗಳು ಮುಂದಾಗಿದ್ದಾಗಿದ್ದು ತಿಳಿದು ಬಂದಿದ್ದು, ಕಮೀಷನ್ ಪಡೆದು ಹಳೆ ನೋಟು ಬದಲಾವಣೆಗೆ ಡೀಲ್ ನಡೆಸಿದ್ದರು. 100 ರೂಗೆ 30 ರೂ ಕಮೀಷನ್ ನಂತೆ ಮಾಡಿಕೊಂಡ ಡೀಲ್ ಇದಾಗಿದ್ದು, ಹಳೆ ನೋಟ್ ನೀಡಿದವರಿಂದ 30 ಲಕ್ಷ ಕೊಡಬೇಕೆಂದು ಡೀಲ್ ಕುದುರಿಸಿದ್ದ ಆರೋಪಿಗಳು ಈಗ ಅಂದರ್ ಆಗಿದ್ದಾರೆ.
Advertisement
Advertisement
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ತೋಳಮಟ್ಟಿ ಗ್ರಾಮದ ಶಂಕರ್ ಗಾಮಾ ಎಂಬವನು ಇದರಲ್ಲಿ ಭಾಗಿಯಾಗಿದ್ದು, ಹಳೆ ನೋಟ್ ನೀಡೋಕೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದಂತೆ ಮಹಾರಾಷ್ಟ್ರ, ಉತ್ತರಪ್ರದೇಶ, ಗೋವಾ, ರಾಜಸ್ಥಾನ ಮೂಲದವರು ಹಳೆನೋಟು ಪಡೆದು ಹೊಸನೋಟು ನೀಡೋಕೆ ಮುಂದಾಗಿದ್ದರು. ಹಣ ಕೊಡುವವರು ಮತ್ತು ಹೊಸ ನೋಟು ಕೊಡುವವರು ಇಬ್ಬರೂ ಪರಸ್ಪರ ಮೋಸ ಮಾಡಲು ಪ್ಲಾನ್ ರೂಪಿಸಿದ್ದರು ಎನ್ನಲಾಗಿದೆ.
Advertisement
ಹಣ ಡಬ್ಲಿಂಗ್ ಪ್ರಕರಣದಲ್ಲಿ ಎಸ್ ಪಿ ಕಚೇರಿ ಮಿನಿಸ್ಟೇರಿಯಲ್ ಸಿಬ್ಬಂದಿ ಅಶೋಕ ನಾಯಕ್ ಭಾಗಿಯಾಗಿದ್ದು, ಆತನ ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಆತನನ್ನು ಬಂಧಿಸದೆ ಆತನಿಂದಲೇ ಪೊಲೀಸರು ದೂರು ಪಡೆದಿದ್ದಾರೆ. ಈ ಬಗ್ಗೆ ಎಸ್‍ಪಿಯವರನ್ನು ಕೇಳಿದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.
Advertisement
ಮನಿ ಡಬ್ಲಿಂಗ್, ನೋಟ್ ಎಕ್ಸ್ ಚೇಂಜ್ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿಯನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ನಮ್ಮದೇ ಆರ್‍ಟಿಜಿಎಸ್ ಕಂಪನಿ ಇದೆ. ಆರ್‍ಬಿಐ ಸಿಬ್ಬಂದಿ ನಮಗೆ ಪರಿಚಯ ಇದ್ದಾರೆ. ಹಳೆ ನೋಟ್ ಕೊಟ್ಟರೆ ಹೊಸ ನೋಟ್ ನೀಡೋದಾಗಿ ಹೇಳಿಕೊಂಡು ಮೋಸ ಮಾಡುತ್ತಿದ್ದರು. ಈ ಹಿಂದೆ ಇದೇ ಗ್ಯಾಂಗ್ ಬೆಂಗಳೂರು, ಚೆನ್ನೈನಲ್ಲಿ ವಂಚನೆಗೆ ವಿಫಲ ಯತ್ನ ನಡೆಸಿದೆ.
ಸದ್ಯ ಬಾಗಲಕೋಟೆ ಡಿಸಿಐಬಿ ಇನ್ಸ್ ಪೆಕ್ಟರ್ ಸಂಜೀವ್ ಕಾಂಬಳೆ, ನಗರ ಠಾಣೆ ಸಿಪಿಐ ಶ್ರೀಶೈಲ್ ಗಾಬಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಇದಾಗಿದ್ದು, ನವನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv