ರಾಯಚೂರು: ದಾಖಲೆಗಳಿಲ್ಲದ 12 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ ಘಟನೆ ರಾಯಚೂರಿನ (Raichur) ಕೊತ್ತದೊಡ್ಡಿಯಲ್ಲಿ (Kottadoddi) ನಡೆದಿದೆ.
ಚುನಾವಣಾ (Election) ನೀತಿ ಸಂಹಿತೆ ಜಾರಿಗೂ ಮುನ್ನವೇ ರಾಯಚೂರು ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಅಲರ್ಟ್ ಆಗಿದ್ದಾರೆ. ತೆಲಂಗಾಣದ (Telangana) ಗದ್ವಾಲ್ ಜಿಲ್ಲೆಯ ತೊರೊವೋಪಡ್ಡಿ ಗ್ರಾಮದ ಶರವಣ ಮತ್ತು ಮದನ ಎಂಬುವವರು ಅಕ್ರಮವಾಗಿ 12 ಲಕ್ಷ ರೂ. ಹಣವನ್ನು ಸಾಗಿಸುತ್ತಿದ್ದರು. ಕೊತ್ತದೊಡ್ಡಿ ಚೆಕ್‌ಪೋಸ್ಟ್‌ನಲ್ಲಿ (Checkpost) ತಪಾಸಣೆ ವೇಳೆ ಅಕ್ರಮ ಹಣ ಸಾಗಾಟ ಕಂಡುಬಂದಿದೆ. ಕಾರಿನಲ್ಲಿ ಸಾಗಿಸುತ್ತಿದ್ದ ಹಣಕ್ಕೆ ಯಾವುದೇ ದಾಖಲೆಗಳು ಇಲ್ಲದಿರುವುದು ತಪಾಸಣೆ ವೇಳೆ ತಿಳಿದು ಬಂದಿದ್ದು, ಪೊಲೀಸರು ಹಣವನ್ನು ಜಪ್ತಿಗೊಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕಿಂದು ಪ್ರಧಾನಿ ಮೋದಿ ಆಗಮನ
ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ರಿಲೀಸ್ – 124 ಕ್ಷೇತ್ರಗಳಿಗೆ ಅಭ್ಯರ್ಥಿ