ಮೈಸೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 12 ಕೆಜಿ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಜಿಲ್ಲೆಯ ಬೋಗಾದಿ ಬಡಾವಣೆಯ ಶ್ರೀದೇವಿ ನರ್ಸಿಂಗ್ ಹೋಂನಲ್ಲಿ ವೈದ್ಯರು ಹೊರ ತೆಗೆದಿದ್ದಾರೆ.
ಮೈಸೂರಿನ ಶಾಂತಿನಗರದ ನಿವಾಸಿ 45 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗೆಡ್ಡೆ ಪತ್ತೆಯಾಗಿದೆ. ಮಹಿಳೆಯು ಬಹಳ ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇತ್ತಿಚಿಗೆ ಚಿಕಿತ್ಸೆಗೆಂದು ಶ್ರೀದೇವಿ ನರ್ಸಿಂಗ್ ಹೋಂಗೆ ಬಂದಾಗ ವೈದ್ಯರು ಆಕೆಗೆ ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ. ಇಂದು ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿ ಆಕೆ ಹೊಟ್ಟೆಯಲ್ಲಿದ್ದ ಸುಮಾರು 12 ಕೆಜಿ ತೂಕದ ಗೆಡ್ಡೆಯನ್ನು ವೈದ್ಯರು ಹೊರತೆಗೆದಿದ್ದಾರೆ.
Advertisement
ಡಾ.ಬಿ.ಡಿ ದೇವರಾಜ್ ನೇತೃತ್ವದ ವೈದ್ಯರ ತಂಡದಿಂದ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಮಹಿಳೆಯನ್ನು ವೈದ್ಯರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
Advertisement
ಅಷ್ಟೆ ಅಲ್ಲದೆ ಮಹಿಳೆ ಹೊಟ್ಟೆಯಿಂದ ಹೊರತಗೆದ ಗೆಡ್ಡೆಯು ಇತ್ತಿಚಿನ ವರ್ಷಗಳಲ್ಲಿ ಕಂಡು ಬಂದ ಅತೀ ದೊಡ್ಡ ಗಾತ್ರದ ಗೆಡ್ಡೆಯಾಗಿದ್ದು, ಆಸ್ಪತ್ರೆಯಲ್ಲಿದ್ದ ಜನರು ಬಹಳ ಕುತೂಹಲದಿಂದ ಗೆಡ್ಡೆಯನ್ನು ವೀಕ್ಷಿಸಿದರು ಎಂದು ವೈದ್ಯರು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv