ಬಾಗಲಕೋಟೆ: 12 ಜನ ಅಂತರ್ ರಾಜ್ಯ ಕಳ್ಳರನ್ನು ಜಿಲ್ಲೆಯ ಇಳಕಲ್ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 1.50 ಲಕ್ಷ ರೂ. ನಗದು, 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 4 ಬೈಕ್ ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶ ಮೂಲದ ಗೂಗಲ್ ಜಿನ್ನಾ, ದಾಸ್ ಬಾಬು, ನಾನಿ ಗುಗಲಾ, ಬಾಣಾಲ್ ಚಿನ್ನಾ, ವಿಜಯ ಅಕುಲಾ, ಇಳಯ ರಾಜಾ, ಪ್ರಸಂಗಿ ಬಾನಾಲಾ, ರಾಜು, ಮೈಕಲ್ ರಾಜು ಉಪತೊಲ್ಲಾ, ಆಂಜನೇಯ ಬೆಲ್ದಾರಾ, ಎಲಿಜಾ ಬಾಣಾಲ್ ಹಾಗೂ ನಂದಾ ಚೆಲ್ಲಾ ಬಂಧಿತ ಆರೋಪಿಗಳು.
Advertisement
ಬಂಧಿತರು ಇದೇ ವರ್ಷ ಮಾರ್ಚ್ 29ರಂದು ಇಳಕಲ್ ನಗರದ ವಿಶ್ವನಾಥ ಪಾಟೀಲ್ ಮನೆಯಲ್ಲಿ 3 ಲಕ್ಷ ರೂ. ನಗದು, 151 ಗ್ರಾಂ ಚಿನ್ನ ದೋಚಿದ್ದರು. ಮಾರ್ಕಂಡಯ್ಯ ವಗ್ಗಾ ಎಂಬವರು ಆಗಸ್ಟ್ 16ರಂದು ಇಳಕಲ್ ನ ಎಸ್.ಬಿ.ಐ ಬ್ಯಾಂಕಿನಿಂದ ಹಣ ಬ್ಯಾಗ್ ಹಿಡಿದು ಹೊರಗೆ ಬಂದಿದ್ದರು. ಆಗ ಹಿಂಬದಿಯಿಂದ ಬಂದ ಆರೋಪಿಗಳು ಬ್ಯಾಗ್ ಕಿತ್ತುಕೊಂಡು ಹೋಗಿದ್ದರು.
Advertisement
ರಾಜ್ಯದ ವಿವಿಧ ಭಾಗದಲ್ಲಿ ಇವರು ಕಳ್ಳತನ ಮಾಡುತ್ತಿದ್ದು, ಇವರ ಪತ್ತೆಗಾಗಿ ಬಲೆ ಬೀಸಿದ್ದ ಇಳಕಲ್ ಪೊಲೀಸರು 12 ಜನರನ್ನು ತುಮಕೂರಿನಲ್ಲಿ ಬಂಧಿಸಿದ್ದಾರೆ. ಇವರೆಲ್ಲರೂ ವಿವಿಧ ಗ್ರಾಮಗಳಿಗೆ ಹೋಗಿ, ಅಲ್ಲಿ ಕೆಲವು ದಿನಗಳ ಕಾಲವಿದ್ದು, ಎಲ್ಲವನ್ನೂ ವೀಕ್ಷಿಸಿ ಕಳ್ಳತನ ಮಾಡುತ್ತಿದ್ದರು. ಇವರ ಜೊತೆಗೆ ದೊಡ್ಡ ತಂಡವೇ ಬಂಧಿತರ ಹಿಂದಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಉಳಿದವರನ್ನು ಪತ್ತೆ ಹಚ್ಚಲು ವಿಚಾರಣೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv