ಮುಂಬೈ: ವಿಶ್ವ ಕ್ರಿಕೆಟ್‍ನಲ್ಲಿ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತ 3ನೇ ವರ್ಷ ವಿಶ್ವ ಕ್ರಿಕೆಟಿನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
2017 ರಲ್ಲಿ 2,818 ರನ್ ಸಿಡಿಸಿದ್ದ ಕೊಹ್ಲಿ ಈ ಬಾರಿ 2,735 ರನ್ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಹಾಗೂ ಟೆಸ್ಟ್ ಎರಡು ಮಾದರಿಗಳಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೇ ವಿಶ್ವ ಕ್ರಿಕೆಟಿನಲ್ಲಿ ಹೆಚ್ಚು ರನ್ ಗಳಿಸಿದ 24ನೇ ಆಟಗಾರರಾಗಿದ್ದು, ಈ ಮೂಲಕ ಕಳೆದ ಬಾರಿಗಿಂತ 12 ಮಂದಿ ಆಟಗಾರರನ್ನ ಹಿಂದಿಕ್ಕಿ ಈ ಹೆಗ್ಗಳಿಕೆ ಪಡೆದಿದ್ದಾರೆ.
Advertisement
Advertisement
ಆಸ್ಟ್ರೇಲಿಯಾದ ಮಾರ್ಕ್ ವಾ 16,529 ರನ್, ಮೈಕಲ್ ಕ್ಲಾಕ್ 17,236 ರನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 17,236 ರನ್, ಟೀಂ ಇಂಡಿಯಾದ ವೀರೇಂದ್ರ ಸೆಹ್ವಾಗ್ 17,253 ರನ್, ಪಾಕಿಸ್ತಾನದ ಮೊಹಮ್ಮದ್ ಯೂಸುಫ್ 17,300 ರನ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 17,671 ರನ್, ಆಸೀಸ್ ತಂಡದ ಅಲನ್ ಬಾರ್ಡರ್ 17,698 ರನ್, ಪಾಕ್‍ನ ಯೂನಿಸ್ ಖಾನ್ 17,790 ರನ್, ಹಶೀಮ್ ಆಮ್ಲ 18,066* ರನ್, ಸ್ಟೀವ್ ವಾ 18,496 ರನ್, ಕ್ರಿಸ್ ಗೇಲ್ 18,548* ರನ್ ಹಾಗೂ 18,575 ರನ್ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.
Advertisement
2018ರಲ್ಲಿ 47 ಇನ್ನಿಂಗ್ಸ್ ಗಳಲ್ಲಿ 11 ಶತಕ, 9 ಅರ್ಧ ಶತಕಗಳನ್ನು ಸಿಡಿಸಿದ್ದು, 68.37 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಕೊಹ್ಲಿ ಒಟ್ಟಾರೆ 18,989 ರನ್ ಗಳಿಸಿದ್ದು, 19 ಸಾವಿರ ರನ್ ಪೂರ್ಣಗೊಳಿಸಲು 11 ರನ್ ಮಾತ್ರಬಾಕಿ ಇದೆ. ಐಸಿಸಿ ಟೆಸ್ಟ್ ಮತ್ತು ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
Advertisement
ಕೊಹ್ಲಿ ಬ್ಯಾಟಿಂಗ್ ಅಂಕಿ ಅಂಶಗಳು ಇಂತಿದೆ:
ಟೆಸ್ಟ್: 76 ಪಂದ್ಯ, 6,590 ರನ್, 54.01 ಸರಾಸರಿ.
ಏಕದಿನ: 216 ಪಂದ್ಯ, 10,230 ರನ್ 59.83 ಸರಾಸರಿ.
ಟಿ20: 65 ಪಂದ್ಯ, 2,167 ರನ್, 49.25 ಸರಾಸರಿ.
ಒಟ್ಟು: 398 ಇನ್ನಿಂಗ್ಸ್, 18,989 ರನ್, 56.34 ಸರಾಸರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv