ಚಂಡಿಗಢ: ಪಂಜಾಬ್‍ನ (Punjab) ಬಕೆನ್‍ವಾಲಾ (Bakenwala) ಎಂಬಲ್ಲಿ ಭೀಕರ ಸುಂಟರಗಾಳಿ (Tornado) ಅಪ್ಪಳಿಸಿ 30 ಮನೆಗಳಿಗೆ ಹಾನಿಯಾಗಿದೆ. ಹಾಗೂ 12 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಗ್ರಾಮಸ್ಥರು ಸುಂಟರಗಾಳಿಯನ್ನು ನೋಡಿದ್ದಾರೆ. ಸುಮಾರು 2ರಿಂದ 2.5 ಕಿಮೀ ಪ್ರದೇಶದಲ್ಲಿ ಸುಂಟರಗಾಳಿ ಹಾನಿಯನ್ನುಂಟು ಮಾಡಿದೆ ಎಂದು ಬಕೆನ್‍ವಾಲಾ ನಿವಾಸಿ ಗುರುಮುಖ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ
Advertisement
ಗಾಳಿಯ ರಭಸಕ್ಕೆ ಹೊಲಗಳು ಮತ್ತು ತೋಟಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ. ಮನೆ ಹಾನಿಗೊಳಗಾದ ಗ್ರಾಮಸ್ಥರನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಜಿಲ್ಲಾಧಿಕಾರಿ (Deputy Commissioner) ಸೇನು ದುಗ್ಗಲ್ ಸಂತ್ರಸ್ತ ಗ್ರಾಮಕ್ಕೆ ಭೇಟಿ ನೀಡಿ ಆಸ್ತಿ ಮತ್ತು ಬೆಳೆ (Property and crop) ನಷ್ಟದ ಪರಿಹಾರವನ್ನು ಸರ್ಕಾರ ನೀಡಲಿದೆ. ಈ ಬಗ್ಗೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಜನರಿಗೆ ಸಮಾಧಾನ ಹೇಳಿದ್ದಾರೆ.
Advertisement
Advertisement
ಸುಂಟರಗಾಳಿಯ ವಿನಾಶದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದನ್ನೂ ಓದಿ: Congress First List: 6 ಮಹಿಳೆಯರಿಗೆ ಟಿಕೆಟ್