ಜೈಪುರ: ರಾಜಸ್ಥಾನದ (Rajasthan) ಧೋಲ್ಪುರದಲ್ಲಿ ಬಸ್ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿ ಎಂಟು ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ.
ಕರೌಲಿ-ಧೋಲ್ಪುರ್ (Dholpur) ಹೆದ್ದಾರಿ ಎನ್‌ಹೆಚ್‌ಬಿಯ ಸುನಿಪುರ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಮೃತರಲ್ಲಿ 8 ಮಕ್ಕಳಿದ್ದಾರೆ, ಅವರಲ್ಲಿ ಐವರು ಗಂಡು ಮಕ್ಕಳು, ಮೂವರು ಬಾಲಕಿಯರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು
ಅಪಘಾತದಲ್ಲಿ ದಂಪತಿ ಮತ್ತು ಎಂಟು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ್ದು, ಮೃತರನ್ನು ಇರ್ಫಾನ್ ಅಲಿಯಾಸ್ ಬಂಟಿ (38), ಅವರ ಪತ್ನಿ ಜೂಲಿ (34), ಪುತ್ರಿ ಅಸ್ಮಾ (14), ಪುತ್ರ ಸಲ್ಮಾನ್ (8), ಪರ್ವೀನ್ (32), ಜರೀನಾ (35), ಸಾಕಿರ್ (6), ಸಾನಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸುದೀಪ್‌ಗೆ ಮಾತೃ ವಿಯೋಗ- ಶ್ರದ್ಧಾಂಜಲಿ ಸಲ್ಲಿಸಿದ ದುನಿಯಾ ವಿಜಯ್
ಮಾಹಿತಿ ಪ್ರಕಾರ ಆಟೋ ಸವಾರ ಬರಿ ನಗರದ ಗುಮತ್ ಮೊಹಲ್ಲಾ ನಿವಾಸಿ. ಬರೌಲಿ ಗ್ರಾಮದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಹಿಂತಿರುಗುತ್ತಿದ್ದರು. ಅಷ್ಟರಲ್ಲಿ ಈ ಅವಘಡ ಸಂಭವಿಸಿದೆ. ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ದೆಹಲಿಯ CRPF ಶಾಲೆ ಬಳಿ ಭಾರೀ ಸ್ಫೋಟ