ಕೋಲ್ಕತ್ತಾ: ಬಾಗ್ರಿ ಮಾರುಕಟ್ಟೆ ಪ್ರದೇಶದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 30 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ತಡರಾತ್ರಿ 2.45 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಿಂದಾಗಿ ಇಡೀ ಪ್ರದೇಶವೇ ಕಪ್ಪು ಹೊಗೆಯಿಂದ ಆವರಿಸಿಕೊಂಡಿತ್ತು. ಸಿಬ್ಬಂದಿ ವರ್ಗ ಎಂಟು ಗಂಟೆಗಳಿಂದಲೂ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ.
Advertisement
ಅವಘಡ ಸಂಭವಿಸಿದ ಸ್ಥಳ ಕಿರಿದಾಗಿದ್ದರಿಂದ ಪ್ರವೇಶಿಸಲು ಕಷ್ಟವಾಗಿತ್ತು. ಕಟ್ಟಡದೊಳಗೆ ಪ್ರವೇಶಿಸಲು ಹೈಡ್ರಾಲಿಕ್ ಏಣಿ ಬಳಸಿ ಗ್ಯಾಸ್ ಕಟ್ಟರ್ ಮೂಲಕ ಗ್ರಿಲ್‍ಗಳನ್ನು ಕತ್ತರಿಸಿ ಕೊಠಡಿಯ ಒಳಗೆ ಹೋಗಿ ಕೊನೆಗೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Advertisement
ಇದು ಐದು ಅಂತಸ್ತಿನ ಮಹಡಿಯಾಗಿದ್ದು, ಕೆಳ ಮಹಡಿಯಲ್ಲಿ ಮೊದಲು ಬೆಂಕಿ ಹತ್ತಿಕೊಂಡಿತ್ತು. ಕಟ್ಟಡದಲ್ಲಿ ಲೇಖನಗಳ ಪ್ರತಿಗಳು, ಔಷಧಿ, ಆಭರಣ, ಸೌಂದರ್ಯ ದ್ರವ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಗ್ನಿ ದುರಂತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Advertisement
Fire breaks out in Kolkata Bagree market, no casualty | https://t.co/PzlmSu9gUw pic.twitter.com/yUZyngXVQD
— Economic Times (@EconomicTimes) September 16, 2018
Advertisement
Latest visuals from Kolkata's Bagri market on Canning Street where fire had broken out earlier today. Fire fighting operation is still underway. No casualties have been reported. #WestBengal pic.twitter.com/EPR4H1GOxP
— ANI (@ANI) September 16, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv