ರಾಂಚಿ: ಬಹುಮಹಡಿ ಕಟ್ಟಡದಲ್ಲಿ (Multi-Storey Building) ಸಂಭವಿಸಿದ ಬೆಂಕಿ (Fire) ಅವಘಡದಲ್ಲಿ 14 ಮಂದಿ ಸಾವನ್ನಪ್ಪಿದ ಘಟನೆ ಜಾರ್ಖಂಡ್‍ನಲ್ಲಿ (Jharkhand) ನಡೆದಿದೆ.
ಜಾರ್ಖಂಡ್‍ನ ಧನ್‍ಬಾದ್‍ನ (Dhanbad) ಜೋರಾಫಟಕ್‍ನಲ್ಲಿರುವ 13 ಅಂತಸ್ತಿನ ಕಟ್ಟಡವೊಂದರಲ್ಲಿ ಈ ಘಟನೆ ನಡೆದಿದೆ. ಘಟನೆ ವೇಳೆ 10 ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ. ಅವರನ್ನೆಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
धनबाद के आशीर्वाद टावर अपार्टमेंट में आग लगने से लोगों की मृत्यु अत्यंत मर्माहत करने वाली है। जिला प्रशासन द्वारा युद्ध स्तर पर कार्य किया जा रहा है तथा हादसे में घायल लोगों को उपचार उपलब्ध कराया जा रहा है। मैं खुद पूरे मामले को देख रहा हूँ।
— Hemant Soren (@HemantSorenJMM) January 31, 2023
Advertisement
ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿ ನಂದಿಸಲು 40 ಅಗ್ನಿಶಾಮಕ ಟೆಂಡರ್‌ಗಳು ನೆರೆದಿತ್ತು. ಘಟನೆಗೆ ಸಂಬಂಧಿಸಿ ನರೇಂದ್ರ ಮೋದಿ (Narendra Modi) ಹಾಗೂ ಜಾರ್ಖಂಡ್‍ನ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದರು. ಇದನ್ನೂ ಓದಿ: Union Budget 2023: ಕೇಂದ್ರ ಬಜೆಟ್ – ಚುನಾವಣಾ ವರ್ಷದಲ್ಲಿ ರಾಜ್ಯಕ್ಕೆ ಸಿಗಲಿದ್ಯಾ ಬಿಗ್ ಗಿಫ್ಟ್?
Advertisement
Deeply anguished by the loss of lives due to a fire in Dhanbad. My thoughts are with those who lost their loved ones. May the injured recover soon: PM @narendramodi
— PMO India (@PMOIndia) January 31, 2023
Advertisement
ಟ್ವೀಟ್‍ನಲ್ಲಿ ಏನಿದೆ?: ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಧನ್‍ಬಾದ್‍ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಸಾವನ್ನಪ್ಪಿರುವ ವಿಷಯ ಕೇಳಿ ತೀವ್ರ ದುಃಖವಾಗಿದೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು. ಹಾಗೂ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಹಾಗೂ ಗಾಯಳುಗಳಿಗೆ 50,000ರೂ. ಪರಿಹಾರವನ್ನು ಘೋಷಿಸಿದರು. ಇದನ್ನೂ ಓದಿ: ಚೀನಾ ಓಲೈಸಲು ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಮಹೇಶ್ ಜೇಠ್ಮಾಲನಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k