ಲಕ್ನೋ: 12 ದಿನದ ಹಸುಗೂಸನ್ನ ಕೋತಿಯೊಂದು ತಾಯಿಯಿಂದ ಕಿತ್ತುಕೊಂಡು ಕೊಂದಿರುವ ಘಟನೆ ಆಗ್ರಾದ ಕಚ್ಚಾರಾ ಥೋಕ್ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ಸಂಜೆ ತಾಯಿ ನೇಹಾ ಮಗುವಿಗೆ ಹಾಲುಣಿಸುತ್ತಿದ್ದರು. ಮನೆಯ ಮುಖ್ಯ ದ್ವಾರದಿಂದ ಕೋತಿ ಮನೆಗೆ ನುಗ್ಗಿದೆ, ಮಗುವಿಗೆ ಹಾಲು ಕುಡಿಸುತ್ತಿದ್ದ ತಾಯಿಯ ಬಳಿ ಹೋಗಿ ಮಗುವಿನ ಕತ್ತನ್ನ ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದೆ ಎಂದು ಮೃತ ಮಗುವಿನ ತಂದೆ ಯೋಗೇಶ್ ಹೇಳಿದ್ದಾರೆ.
Advertisement
“ತಾಯಿ ನೇಹಾಳಿಗೆ ಏನಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆ ಕೋತಿ ನಮ್ಮ ಮಗನನ್ನು ಕಿತ್ತುಕೊಂಡು ಹೋಗಿದೆ. ನೆರೆ ಮನೆಯವರೆಲ್ಲರು ಮಂಗವನ್ನ ಬೆನ್ನಟ್ಟಿ ಹೋದಾಗ ನಮ್ಮ ಮಗನನನ್ನು ನೆರೆ ಮನೆಯ ಟೆರೆಸ್ ಮೇಲೆ ಬಿಟ್ಟು ಹೋಗಿದೆ. ಮಗ ಆರುಶ್ ದೇಹದಿಂದ ರಕ್ತ ಹರಿಯುತ್ತಿತ್ತು. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ತೀವ್ರ ಗಾಯವಾದ ಹಿನ್ನಲೆಯಲ್ಲಿ ಮಗು ಮೃತ ಪಟ್ಟಿದೆ ಎಂಬುದಾಗಿ ತಿಳಿಸಿದರು” ಎಂದು ಯೋಗೇಶ್ ಹೇಳಿದ್ದಾರೆ.
Advertisement
ಸ್ಥಳಿಯರ ಪ್ರಕಾರ, ಈ ಕೋತಿಯೂ ನೇಹಾ ಮತ್ತು ಯೋಗೇಶ್ ಅವರ ಮಗುವನ್ನ ಕಿತ್ತುಕೊಳ್ಳುವ 15 ನಿಮಿಷಗಳ ಹಿಂದೆ 14 ವರ್ಷದ ಬಾಲಕಿಯ ಮೇಲೆಯೂ ಆಕ್ರಮಣ ಮಾಡಿದೆ. ಬಾಲಕಿಯು ಸಣ್ಣ-ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಯೋಗೇಶ್ ಅವರಿಗೆ 12 ದಿನದ ಆರುಶ್ ಒಬ್ಬನೇ ಮಗನಾಗಿದ್ದು, ಮದುವೆಯಾಗಿ 2 ವರ್ಷದ ನಂತರ ಆರುಶ್ ಜನಿಸಿದ್ದ.
Advertisement
Advertisement
ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ರಂಕಾಟ ಪೊಲೀಸ್ ಠಾಣೆಯ ಎಸ್‍ಐ ಅಟ್ಬಿರ್ ಸಿಂಗ್, ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗ ಕಳಿಸಿದ್ದು, ಅವರ ಕುಂಟುಬಕ್ಕೆ ಆದಷ್ಟು ಬೇಗ ಮೃತ ದೇಹವನ್ನು ಹಸ್ತಾಂತರ ಮಾಡಲಾಗುವುದು. ಮಗುವಿನ ತಲೆಗೆ ತೀವ್ರ ಗಾಯವಾಗಿರುವುದನ್ನ ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ, ಕೋತಿ ಇದೇ ರೀತಿಯ ಇನ್ನೊಂದು ಮಗುವಿನ ಮೇಲೆ ಆಕ್ರಮಣ ಮಾಡಿತ್ತು. ಘಟನೆಯಲ್ಲಿ ಸಣ್ಣ-ಪುಟ್ಟ ಗಾಯಗಳಿಂದ ಮಗು ಪ್ರಾಣಾಪಾಯದಿಂದ ಪಾರಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹಳ್ಳಿಯ ಜನರಿಗೆ ತೀವ್ರ ತಲೆ ನೋವಾಗಿರುವ ಈ ಮಂಗಳ ಕಾಟವೂ ಅತಿರೇಕಕ್ಕೇರಿದ್ದು, ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಯುವಕನ ಮೇಲೆ ಮಂಗಗಳ ಗುಂಪೊಂದು ದಾಳಿ ಮಾಡಿದೆ. ಯುವಕ ತನ್ನ ಬೈಕ್ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಹೊಡೆದು ಸಾವನ್ನಪ್ಪಿದ್ದಾನೆ. ಈ ಮಂಗಗಳ ಕಾಟದಿಂದ ಪರಿಹಾರ ನೀಡಿ ಎಂದು ಸ್ಥಳೀಯರು ಪೊಲೀಸರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews