ಕಾರವಾರ: ಶ್ರೀಗಂಧವನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಶಿರಸಿಯ ಹುಲೇಕಲ್ ವಲಯದ ಅರಣ್ಯ ಅಧಿಕಾರಿಗಳು ಮಾಲು ಸಮೇತವಾಗಿ ಬಂಧಿಸಿದ್ದಾರೆ.
ಮನಜವಳ್ಳಿಯ ಕೃಷ್ಣ ಗೌಡ ಬಂಧಿತ ಆರೊಪಿಯಾಗಿದ್ದಾನೆ. ಬಂಧಿತನಿಂದ 12. ಕೆ.ಜಿ. ತೂಕದ ಶ್ರೀ ಗಂಧ ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಸಿ ತಾಲೂಕಿನ ಹುಲೆಕಲ್ ವಲಯದ ಶೀಗೆಹಳ್ಳಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಈತ ಶ್ರೀಗಂಧವನ್ನು ಕಳ್ಳತನ ಮಾಡುತ್ತಿದ್ದ. ಈ ವಿಚಾರವಾಗಿ ತಿಳಿದ ಗ್ರಾಮಸ್ಥರು ಹಾಗೂ ಗ್ರಾಮ ಅರಣ್ಯ ಸಮೀತಿಯ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಆತನನ್ನು ಬಂಧಿಸಿದ್ಧಾರೆ.