ಚಾಮರಾಜನಗರ: ಆಧುನಿಕ ಯುಗ ನಮ್ಮನ್ನೆಲ್ಲಾ ಅವರಿಸುತ್ತಿರುವ ಹಾಗೇ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸತ್ತ ಸಂಬಂಧಿಕರ ಮುಖವನ್ನು ನೋಡಲು ಬರದಂತ ಕಾಲ ಇದಾಗಿದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಅಪಘಾತದಲ್ಲಿ ಸಾವಿಗೀಡಾದ ಕೋತಿಗೆ ತಿಥಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ನರೀಪುರ ಗ್ರಾಮದ ಯುವಕರು ಕೋತಿ ಸಾವಿನ 11ನೇ ದಿನದ ಕಾರ್ಯವನ್ನು ವಿಧಿ ವಿಧಾನದ ಮೂಲಕ ನೇರವೆರಿಸಿದರು. ಏಪ್ರಿಲ್ 29 ರಂದು ಈ ಕೋತಿ ನರೀಪುರದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಮುಂದಿನ 209 ಎನ್.ಎಚ್.ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿತ್ತು. ಹೀಗಾಗಿ ಅಂದು ಗ್ರಾಮದ ಯುವಕರೆಲ್ಲಾ ದೇವಸ್ಥಾನದ ಹಿಂದೆ ಅಂತ್ಯಸಂಸ್ಕಾರ ಮಾಡಿದ್ರು.
ಇಂದಿಗೆ 11 ದಿನ ಕಳೆದ ಹಿನ್ನೆಲೆಯಲ್ಲಿ ಮನುಷ್ಯರಿಗೆ ಮಾಡುವ ತಿಥಿ ಕಾರ್ಯದ ರೀತಿ ಈ ಕೋತಿಗೆ ತಿಥಿ ಮಾಡಲಾಯಿತು.