ನವದೆಹಲಿ: ಭಾರತದಲ್ಲಿ 118 ವರ್ಷಗಳ ಬಳಿಕ ಆರ್ಕಿಡ್ ಜಾತಿಗೆ ಸೇರಿದ ಹೂ ಕಂಡು ಬಂದಿದೆ. ಉತ್ತರ ಪ್ರದೇಶದ ದುಧವಾ ಹುಲಿ ಸಂರಕ್ಷಣ ಅರಣ್ಯ ಪ್ರದೇಶದಲ್ಲಿ ಹೂ ಲಭ್ಯವಾಗಿದೆ.
ಈ ಹೂವಿನ ವೈಜ್ಞಾನಿಕ ಹೆಸರು ಯುಲೋಫಿಯಾ ಓಬ್ಟಿಸಾ (Eulophia obtusa). ಐಯುಸಿಎನ್ ಅಳಿವಿನಂಚಿನಲ್ಲಿರೋ ಹೂಗಳ ಕೆಂಪು ಪಟ್ಟಿಯಲ್ಲಿ ಯುಲೋಫಿಯಾ ಓಬ್ಟಿಸಾ ಹೆಸರನ್ನು ಸೇರಿಸಿದೆ. 1902ರಲ್ಲಿ ಈ ಹೂ ಪತ್ತೆಯಾಗಿತ್ತು ಎಂಬುದರ ಬಗ್ಗೆ ಕ್ಯೂ ಹರ್ಬೇರಿಯಂ ದಾಖಲೆಗಳಲ್ಲಿ ಉಲ್ಲೇಖವಿದೆ. 19ನೇ ಶತಮಾನದಲ್ಲಿ ಗಂಗಾ ನದಿ ಪ್ರದೇಶದ ಆಯಿರ್ವೇದ ತಜ್ಷರು ಈ ಹೂವನ್ನು ಇಲ್ಲಿಗೆ ತಂದಿದ್ದರು. ಆದಾದ ಬಳಿಕ 100 ವರ್ಷದ ನಂತರ ವಿಶೇಷವಾದ ಹೂ ಲಭ್ಯವಾಗಿದೆ.
Advertisement
Advertisement
ಈ ಕುರಿತು ಮಾಹಿತಿ ನೀಡಿರುವ ಆರ್ಕಿಡ್ ಜಾತಿಯ ಅಳಿವಿನಂಚಿನಲ್ಲಿರೋ ಹೂಗಳ ಸಂಶೋಧನೆ ತಂಡದ ನಿರ್ದೇಶಕ ಸಂಜಯ್ ಪಾಟಕ್, ನಮಗೆ ಜೂನ್ 30ರಂದು ಈ ಹೂ ಸಿಕ್ಕಿತು. ಕೂಡಲೇ ಹೂವಿನ ಫೋಟೋ ಕ್ಲಿಕ್ಕಿಸಿ ಬಾಂಗ್ಲಾದೇಶದ ಸಸ್ಯ ಶಾಸ್ತ್ರಜ್ಞ ಮೊಹ್ಮದ್ ಶರೀಫ್ ಹುಸೈನ್ ಸೌರವ್ ಅವರಿಗೆ ಕಳಿಸಿದೆ. ಸದ್ಯ ಮೊಹ್ಮದ್ ಶರೀಪ್ ಜರ್ಮನಿಯಲ್ಲಿದ್ದು, ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಈ ಹೂ ಯುಲೋಫಿಯಾ ಓಬ್ಟಿಸಾ ಎಂದು ಖಚಿತಪಡಿಸಿದ್ದಾರೆ ಎಂದು ತಿಳಿಸಿದರು.
Advertisement
Advertisement
ದುಧವಾ ಅರಣ್ಯ ಪ್ರದೇಶದಲ್ಲಿ ಇದೇ ಜಾತಿಯ ಎರಡು ಬಗೆಯ ಹೂಗಳು ಬೇರೆ ಬೇರೆ ಪ್ರದೇಶಗಳಲ್ಲಿವೆ. ಇನ್ನು ಹೆಚ್ಚಿನ ಸ್ಥಳಗಳಲ್ಲಿ ಈ ಹೂ ಇರೋ ಬಗ್ಗೆ ವಿಶ್ವಾಸವಿದೆ ಎಂದು ಪಾಟಕ್ ಹೇಳಿದ್ದಾರೆ. ಇನ್ನು ವಲ್ರ್ಡ್ ವೈಲ್ಡ್ ಫಂಡ್ ಫಾರ್ ನೇಚರ್ ನ ಭಾರತದ ಸಂಯೋಜಕರಾದ ಡಾ. ಮುದಿತ್ ಗುಪ್ತಾ, ಶೀಘ್ರದಲ್ಲಿಯೇ ಯುಲೋಫಿಯಾ ಓಬ್ಟಿಸಾ ಬಗ್ಗೆ ಸರ್ವೇ ನಡೆಯಲಿವೆ ಎಂಬ ಮಾಹಿತಿ ನೀಡಿದ್ದಾರೆ.