ನವದೆಹಲಿ: ದೇಶದಲ್ಲಿ ದಿನ ಕಳೆದಂತೆ ಕೊರೊನಾ ಮಹಾಮಾರಿಯ ಅಟ್ಟಹಾಸ ಮೇರೆ ಮೀರುತ್ತಿದೆ. ಕಳೆದ 24 ಗಂಟೆಗಳಲ್ಲಿ 2,573 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದೂ, ಸೋಂಕಿತರ ಸಂಖ್ಯೆ 43,836ಕ್ಕೆ ಏರಿದೆ.
83 ಮಂದಿ ಮೃತ ಪಟ್ಟಿದ್ದು, ದೇಶದಲ್ಲಿ ಒಟ್ಟು 1,389 ಮಂದಿ ಮೃತಪಟ್ಟಿದ್ದಾರೆ. ದೇಶದ ಶೇ.52ರಷ್ಟು ಪ್ರಕರಣಗಳು ಕೇವಲ ಮಹಾರಾಷ್ಟ್ರ, ದೆಹಲಿ, ಗುಜರಾತ್‍ನಿಂದಲೇ ಬಂದಿವೆ.
Advertisement
Total no. of people with #COVID19 – 42,533
No. of people under active medical supervision – 29,453
In last 24 hours – 2,553 new cases, 1,074 recoveries (highest in 1 day)
Total no. of recoveries – 11,706, recovery rate – 27.52%
– @MoHFW_INDIA #IndiaFightsCoronavirus pic.twitter.com/a116f7HMjL
— PIB India (@PIB_India) May 4, 2020
Advertisement
ಕಳೆದ 24 ಗಂಟೆಯಲ್ಲಿ 1,074 ಮಂದಿ ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ನಿನ್ನೆ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಪ್ರಸ್ತುತ ಭಾರತದಲ್ಲಿ 29,685 ಸಕ್ರಿಯ ಪ್ರಕರಣಗಳಿದ್ದು, 11,761 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
▪️11,706 total patients cured (total recovery rate 27.52%)
▪️42,533 total confirmed cases so far
▪️29,453 cases under active medical supervision
▪️2553 new confirmed cases & 1074 patients cured in last 24 hours#IndiaFightsCoronavirus @MoHFW_INDIA
— PIB India (@PIB_India) May 4, 2020
Advertisement
ದೆಹಲಿ, ಮುಂಬೈನ ಜನತೆ ಲಾಕ್‍ಡೌನ್ ಸರಿಯಾಗಿ ಪಾಲಿಸದಿರುವುದರಿಂದ ಸೋಂಕು ಹೆಚ್ಚಲು ಕಾರಣವಾಯಿತು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಭಿಪ್ರಾಯಪಟ್ಟಿದ್ದಾರೆ. ನಗರಗಳಿಗಿಂತ ಗ್ರಾಮೀಣ ಭಾಗದಲ್ಲಿಯೇ ಲಾಕ್‍ಡೌನ್ ನಿಯಮಗಳನ್ನು ಉತ್ತಮವಾಗಿ ಪಾಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Doubling time of #COVID19 cases has improved from 3.4 before lockdown to 12 days today, lockdown and containment efforts are yielding results, our challenge now is how to further improve these results, to further increase doubling time – JS, @MoHFW_INDIA #IndiaFightsCorona pic.twitter.com/PWft8Gf8Ju
— PIB India (@PIB_India) May 4, 2020
ಚೆನ್ನೈನಲ್ಲಿ ಐಪಿಎಸ್ ಅಧಿಕಾರಿಯೊಬ್ಬರಿಗೆ ಕೊರೊನಾ ಬಂದಿದೆ. ದೆಹಲಿಯಲ್ಲಿ ಬಿಎಸ್‍ಎಫ್ ಯೋಧರೊಬ್ಬರಿಗೆ ಸೋಂಕು ತಗುಲಿದ್ದು, ದೆಹಲಿಯ ಪ್ರಧಾನ ಕಚೇರಿಯ 2 ಅಂತಸ್ತುಗಳನ್ನು ಬಂದ್ ಮಾಡಲಾಗಿದೆ.