ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪ್ರಕರಣಗಳು ಮತ್ತೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,151 ಪಾಸಿಟಿವ್ ಕೇಸ್ ದಾಖಲಾಗಿದೆ. ಇದರೊಂದಿಗೆ ಪಾಸಿಟಿವಿಟಿ ರೇಟ್ ಶೇ. 4.53ಕ್ಕೆ ಏರಿಕೆ ಕಂಡಿದೆ.
Advertisement
ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,617ಕ್ಕೆ ತಲುಪಿದೆ. ಬೆಂಗಳೂರು ನಗರದಲ್ಲೇ ಪ್ರಕರಣಗಳ ಸಂಖ್ಯೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,013 ಪ್ರಕರಣ ಪತ್ತೆಯಾಗಿದ್ದು, 1,104 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,901ಕ್ಕೆ ತಲುಪಿದೆ. ಬೆಂಗಳೂರು ನಗರದ ಬಳಿಕ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ಒಟ್ಟು 24 ಕೇಸ್ ವರದಿಯಾಗಿದೆ. ಈವರೆಗೆ ಒಟ್ಟು 40,089 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,214 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಗುರುತು ಮುಚ್ಚಿಟ್ಟು ಹಿಂದೂ ಯುವತಿಯನ್ನು ದೇವಾಲಯದಲ್ಲೇ ಮದುವೆಯಾದ- ಕೊನೆಗೆ ತಿಳೀತು ಅಸಲಿ ಸತ್ಯ
Advertisement
Advertisement
ಈವರೆಗೆ ರಾಜ್ಯದಲ್ಲಿ ಒಟ್ಟು 39,88,579 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,40,831 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 1,41,713 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 25,399 ಸ್ಯಾಂಪಲ್ (ಆರ್ಟಿಪಿಸಿಆರ್ 16,821 + 8,578 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ವಿಚ್ಚೇದಿತ ಪತಿಯಿಂದಲೇ ಪತ್ನಿಯ ಕೊಲೆ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 4, ಬಳ್ಳಾರಿ 3, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 1,013, ಬೀದರ್ 2, ಚಾಮರಾಜನಗರ 6, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 8, ಚಿತ್ರದುರ್ಗ 0, ದಕ್ಷಿಣ ಕನ್ನಡ 8, ದಾವಣಗೆರೆ 1, ಧಾರವಾಡ 17, ಗದಗ 2, ಹಾಸನ 13, ಹಾವೇರಿ 1, ಕಲಬುರಗಿ 2, ಕೊಡಗು 4, ಕೋಲಾರ 6, ಕೊಪ್ಪಳ 1, ಮಂಡ್ಯ 3, ಮೈಸೂರು 24, ರಾಯಚೂರು 1, ರಾಮನಗರ 0, ಶಿವಮೊಗ್ಗ 5, ತುಮಕೂರು 10, ಉಡುಪಿ 1, ಉತ್ತರ ಕನ್ನಡ 3, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.