ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 50ನೇ ಜನ್ಮದಿನದ ಪ್ರಯುಕ್ತ ಅವರ ಬೆಂಬಲಿಗರೊಬ್ಬರು ಭಾನುವಾರ ಬರೇಲಿಯಲ್ಲಿ 111 ಅಡಿ ಎತ್ತರದ ಕೇಕ್ ಕತ್ತರಿಸುವ ಮೂಲಕ ವಿಶ್ವ ದಾಖಲೆಗೆ ಯತ್ನಿಸುತ್ತಿದ್ದಾರೆ.
ಬರೇಲಿಯ ನವಾಬ್‍ಗಂಜ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕ, ಸಂಸದ ಆರ್ಯ ಅವರ ಕ್ಷೇತ್ರದಲ್ಲಿ ವಿಶ್ವದಾಖಲೆಗೆ ಪ್ರಯತ್ನಿಸಿದ್ದಾರೆ ಎಂದು ಮಾಜಿ ನಗರ ಪಂಚಾಯತ್ ಅಧ್ಯಕ್ಷ ಅಮೀರ್ ಜೈದಿ ತಿಳಿಸಿದರು.
Advertisement
Advertisement
ಎತ್ತರದ ಕೇಕ್‍ಗಳಲ್ಲಿ ಪ್ರಸ್ತುತ ವಿಶ್ವದಾಖಲೆಯಲ್ಲಿ 108.27 ಅಡಿಯ ಕೇಕ್ ದಾಖಲೆಯನ್ನು ಸೃಷ್ಟಿಸಿದೆ. ಆದರೆ 111 ಅಡಿ ಎತ್ತರದ ಕೇಕ್ ಕತ್ತರಿಸುವ ಮೂಲಕ ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಹಂತ ಹಂತವಾಗಿ ಜೋಡಿಸಲಾದ ಈ ಕೇಕ್ 40 ಕ್ವಿಂಟಲ್ ತೂಕವಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಕೇಸ್- 2 ಡೆತ್ ನೋಟ್‍ಗಳು ಲಭ್ಯ
Advertisement
ರಾಜ್ಯದಾದ್ಯಂತ ಮುಖ್ಯಮಂತ್ರಿಗಳು ಶಾಂತಿಗೆ ಹೆಚ್ಚು ಒತ್ತನ್ನು ನೀಡಿರುವ ಹಿನ್ನೆಲೆಯಲ್ಲಿ ಕೇಕ್ ಆಫ್ ಪೀಸ್ ಎಂಬ ಹೆಸರನ್ನು ಇಡಲಾಗಿದೆ. ವಿಶ್ವ ದಾಖಲೆಯ ಈ ಕೇಕ್‍ನಲ್ಲಿ ಮುಖ್ಯಮಂತ್ರಿಯ ಈ ಉದ್ದೇಶವನ್ನು ಜಗತ್ತಿಗೆ ತಿಳಿಸಲು ಕೇಕ್ ಆಫ್ ಪೀಸ್ ಎಂಬ ಹೆಸರನ್ನು ಬಳಕೆ ಮಾಡಲಾಗಿದೆ.
Advertisement
Birthday greetings to UP’s dynamic Chief Minister @myogiadityanath Ji. Under his able leadership, the state has scaled new heights of progress. He has ensured pro-people governance to the people of the state. Praying for his long and healthy life in service of the people.
— Narendra Modi (@narendramodi) June 5, 2022
ಅಯೋಧ್ಯೆ ಮತ್ತು ಇತರೆಡೆಗಳಲ್ಲಿ ಸುಮಾರು 5 ಲಕ್ಷ ಜನರು ಜನ್ಮದಿನದ ನಿಮಿತ್ತ ಹನುಮಾನ್ ಚಾಲೀಸಾವನ್ನು ಪಠಿಸಲು ಯೋಜಿಸಿದ್ದಾರೆ. ಯೋಗಿ ಬೆಂಬಲಿಗರು ಯೋಜಿಸಿರುವ ಈ ಎಲ್ಲಾ ವಿಷಯಗಳ ಬಗ್ಗೆ ಯೋಗಿ ಆದಿತ್ಯನಾಥ್ ಅವರಿಗೆ ತಿಳಿದಿಲ್ಲ ಎಂದು ಬೆಂಬಲಿಗರು ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್