ಬೆಂಗಳೂರು: ರಾಜ್ಯದಲ್ಲಿ ಇಂದು ಬರೋಬ್ಬರಿ 11,265 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದಿನದ ಸೋಂಕಿತರ ಸಂಖ್ಯೆ 11 ಸಾವಿರದ ಗಡಿ ದಾಟಿದಂತಾಗಿದೆ. ಇಂದು 38 ಜನ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ 8,155 ಜನರಿಗೆ ಸೋಂಕು ತಗುಲಿದೆ.
Advertisement
ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 85,480ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,94,912ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇಂದು 4,364 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 9,96,367 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Advertisement
ಇಂದಿನ 14/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/z12f5KIafv @mla_sudhakar @PriyankKharge @BelladArvind @kiranshaw @WFRising @BangaloreBuzz @RCBTweets @NammaKarnataka_@ADinfodeptBIDAR @MangaloreCity pic.twitter.com/zxwCL1st5O
— K’taka Health Dept (@DHFWKA) April 14, 2021
Advertisement
ಈ ವರೆಗೆ ಒಟ್ಟು 13,046 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 506 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 7,612 ಆಂಟಿಜನ್ ಟೆಸ್ಟ್, 1,05,630 ಆರ್ ಟಿಪಿಸಿಆರ್ ಸೇರಿದಂತೆ ಒಟ್ಟು 1,13,242 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 20,513 ಮಂದಿಗೆ ಲಸಿಕೆ ನೀಡಲಾಗಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 68, ಬಳ್ಳಾರಿ 159, ಬೆಳಗಾವಿ 107, ಬೆಂಗಳೂರು ಗ್ರಾಮಾಂತರ 48, ಬೆಂಗಳೂರು ನಗರ 8,155, ಬೀದರ್ 290, ಚಾಮರಾಜನಗರ 72, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 42, ಚಿತ್ರದುರ್ಗ 17, ದಕ್ಷಿಣ ಕನ್ನಡ 140, ದಾವಣಗೆರೆ 34, ಧಾರವಾಡ 127, ಗದಗ 25, ಹಾಸನ 132, ಹಾವೇರಿ 44, ಕಲಬುರಗಿ 376, ಕೊಡಗು 23, ಕೋಲಾರ 116, ಕೊಪ್ಪಳ 37, ಮಂಡ್ಯ 85, ಮೈಸೂರು 356, ರಾಯಚೂರು 65, ರಾಮನಗರ 35, ಶಿವಮೊಗ್ಗ 92, ತುಮಕೂರು 245, ಉಡುಪಿ 110, ಉತ್ತರ ಕನ್ನಡ 41, ವಿಜಯಪುರ 122 ಹಾಗೂ ಯಾದಗಿರಿಯಲ್ಲಿ 58 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ನಗರ 184, ಕಲಬುರಗಿ 44, ಕೋಲಾರ 41, ಮೈಸೂರು 31, ಧಾರವಾಡ 22, ಬೀದರ್ 21 ಹಾಗೂ ತುಮಕೂರಿನಲ್ಲಿ 21 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.