ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

Public TV
1 Min Read
Rape

ರಾಯ್‍ಪುರ: ವರನ ಸೋದರಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬುಧವಾರ ಛತ್ತೀಸಘಡ ರಾಜ್ಯದ ಪೋಧಿ ಗ್ರಾಮದಲ್ಲಿ ನಡೆದಿದೆ.

ಘಟನೆ ಸಂಬಂಧ ವರನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಲ್ಲಿ ವರನ ಸ್ನೇಹಿತ ಬಾಲಕಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಸೇರಿಸಿ ಕುಡಿಸಿದ್ದಾನೆ. ಎಚ್ಚರ ತಪ್ಪಿದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.

ಕೊಲೆಯ ಬಳಿಕ ಬಂದು ಎಲ್ಲರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾನೆ. ಕೆಲವು ಸಮಯದ ಬಳಿಕ ಬಾಲಕಿ ಕಾಣೆಯಾಗಿರುವುದು ಪೋಷಕರ ಗಮನಕ್ಕೆ ಬಂದಿದೆ. ಈ ವೇಳೆ ಅಲ್ಲಿಯೇ ಇದ್ದ ಆರೋಪಿ ತನಗೆ ಏನು ಗೊತ್ತಿಲ್ಲ ಎಂಬಂತೆ ನಟಿಸಿತ್ತಾ ನಿಂತಿದ್ದ ಅಂತಾ ತನಿಖಾಧಿಕಾರಿಗಳು ತಿಳಿಸಿದ್ದಾರೆ.

Rape Child crime

ಮದುವೆಗೆ ಬಂದ ಎಲ್ಲರೂ ಹೊರಡುವ ತಯಾರಿಯಲ್ಲಿದ್ರು. ಈ ವೇಳೆ ವರನ ಗೆಳೆಯ ಬಾಲಕಿಗೆ ತಂಪು ಪಾನೀಯ ನೀಡಿ ಕರೆದುಕೊಂಡು ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಮಂಟಪದಿಂದ 1.5 ಕಿ.ಮೀ ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ ಬಳಿಕ ಸಿಮೆಂಟ್ ಇಟ್ಟಿಗೆಗಳಿಂದ ಬಾಲಕಿಯ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ನಗ್ನ ಸ್ಥಿತಿಯಲ್ಲಿದ್ದ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಮದುವೆ ಮನೆ ಸೇರಿಕೊಂಡಿದ್ದಾನೆ.

ಬಾಲಕಿ ಕಾಣೆಯಾದ ಬಳಿಕ ಪೋಷಕರು ಹುಡುಕಾಟ ಆರಂಭಿಸಿದಾಗ ಕೊನೆಯದಾಗಿ ವರನ ಗೆಳೆಯನೊಂದಿಗೆ ಹೊರ ಹೋಗಿದ್ದು ತಿಳಿದು ಬಂದಿದೆ. ವರನ ಗೆಳೆಯನನ್ನು ಕರೆದು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *