ಕೀವ್: 11 ವರ್ಷದ ಬಾಲಕನೊಬ್ಬ ರಷ್ಯಾದ ಆಕ್ರಮಣದ ನಡುವೇಯು ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ್ದಾನೆ.
ಆಗ್ನೇಯ ಉಕ್ರೇನ್‍ನ ಝಪೊರೊಝೈಯಿಂದ ಏಕಾಂಗಿಯಾಗಿ 11 ವರ್ಷದ ಉಕ್ರೇನಿಯನ್ ಬಾಲಕನೊಬ್ಬನು ತನ್ನ ಪಶ್ಚಿಮ ನೆರೆಯ ರಾಷ್ಟ್ರವಾದ ಸ್ಲೋವಾಕಿಯಾ ತಲುಪಿದ್ದಾನೆ. ಬಾಲಕನು ಸ್ಲೋವಾಕಿಯಾಕ್ಕೆ ವಯಸ್ಕರ ಸಹಾಯವಿಲ್ಲದೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿ, ತಲುಪಿದ್ದಾನೆ ಎಂದು ಉಕ್ರೇನ್‍ನ ಆಂತರಿಕ ವ್ಯವಹಾರಗಳ ಸಚಿವಾಲಯವು ಮಂಗಳವಾರ ತಿಳಿಸಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ
Advertisement
Advertisement
ಬಾಲಕನು ತನ್ನ ನಗು ಮುಖ, ನಿಜವಾದ ನಾಯಕನಂತಹ ದೃಢಸಂಕಲ್ಪದಿಂದ ಎಲ್ಲರ ಗಮನಸೆಳೆದಿದ್ದು, ಅವನು ಸುರಕ್ಷಿತವಾಗಿದ್ದಾಗಿ ತಲುಪಿದ್ದಾನೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್ ವಾಪಸ್ ಪಡೆದ ಸರ್ಕಾರ- ಹೈಕೋರ್ಟ್ ಗರಂ
Advertisement
ಕೆಲ ಅನಿವಾರ್ಯತೆಗಳ ಕಾರಣ ಬಾಲಕನ ಪೋಷಕರು ಉಕ್ರೇನ್‍ನಲ್ಲಿಯೇ ಉಳಿಯಬೇಕಾಗಿತ್ತು. ಹೀಗಾಗಿ ಅವನು ಒಬ್ಬಂಟಿಗನಾಗಿಯೇ ಗಡಿ ದಾಟಬೇಕಾಯಿತು ಎಂದು ಸಚಿವಾಲಯವೂ ತಿಳಿಸಿದೆ.
Advertisement
10 days.
1.5 million people.
This is now the fastest growing refugee crisis since World War II.
In the coming days millions more lives will be uprooted, unless there is an immediate end to this senseless conflict. pic.twitter.com/OmEcGeMRtS
— UNHCR, the UN Refugee Agency (@Refugees) March 6, 2022
ಬಾಲಕನು ಪ್ಲಾಸ್ಟಿಕ್ ಚೀಲ, ಪಾಸ್‍ಪೋರ್ಟ್ ಮತ್ತು ಫೋನ್ ಸಂಖ್ಯೆಯನ್ನು ಕೈಯಲ್ಲಿ ಬರೆದುಕೊಂಡು ಸ್ಲೋವಾಕಿಯಾಕ್ಕೆ ಬಂದಿರುವುದಾಗಿ ಸ್ಲೋವಾಕಿಯಾ ಸಚಿವಾಲಯವು ಬಾಲಕನ ಸುರಕ್ಷಿತ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಸ್ಲೋವಾಕಿಯಾದ ಸ್ವಯಂಸೇವಕರು ಅವನನ್ನು ಆದರದಿಂದ ಸ್ವಾಗತಿಸಿ ಆಹಾರ ಮತ್ತು ಪಾನೀಯಗಳನ್ನು ನೀಡಿ ಉಪಚರಿಸಿದ್ದಾರೆ. ಬಾಲಕನ ತಾಯಿಯೂ ಅವನ ಕೈಯಲ್ಲಿ ಅವರ ಸಂಬಂಧಿಕರೊಬ್ಬರ ಮೊಬೈಲ್ ಸಂಖ್ಯೆ ಬರೆದಿದ್ದರು. ಇದರ ಸಹಾಯದಿಂದ ಅವನನ್ನು ಸೇರಿಸಬೇಕಾಗಿದ್ದ ಜಾಗಕ್ಕೆ ಸೇರಿಸಿದ್ದೇವೆ ಎಂದು ಸಚಿವಾಲಯವೂ ತಿಳಿಸಿದೆ.
ಮಾರ್ಚ್ 6 ರಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ 10 ದಿನಗಳ ಅಂತರದಲ್ಲಿ 1.5 ಮಿಲಿಯನ್ ಜನರು ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದಿಂದ ಪಲಾಯನ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 24 ರಿಂದ ಸಂಘರ್ಷ ಪ್ರಾರಂಭವಾದಾಗಿನಿಂದಲೂ ಅತಿ ಹೆಚ್ಚು ನಿರಾಶ್ರಿತರನ್ನು ಪೋಲೆಂಡ್ ದೇಶವು ಉಕ್ರೇನ್‍ನಿಂದ ಸ್ವೀಕರಿಸಿದೆ. ಇದುವರೆಗೆ ಒಟ್ಟು 1,735,068 ಉಕ್ರೇನ್ ನಾಗರಿಕರು ಮಧ್ಯ ಯುರೋಪ್‍ನ ಗಡಿ ದಾಟಿದ್ದಾರೆ ಎಂದು ಯುಎನ್‍ಹೆಚ್‍ಸಿಆರ್ ವರದಿ ನೀಡಿದೆ.