Connect with us

ತಲೆ ಮೇಲೆ ಸಿಡಿಯಿತು ಪಟಾಕಿ – ಮೆದುಳು ಹೊರಬಂದು ಬಾಲಕ ಸ್ಥಳದಲ್ಲೇ ಸಾವು

ತಲೆ ಮೇಲೆ ಸಿಡಿಯಿತು ಪಟಾಕಿ – ಮೆದುಳು ಹೊರಬಂದು ಬಾಲಕ ಸ್ಥಳದಲ್ಲೇ ಸಾವು

ಬೆಂಗಳೂರು: ಪಟಾಕಿ ಸ್ಫೋಟಕ್ಕೆ 12 ವರ್ಷದ ಬಾಲಕ ಬಲಿಯಾಗಿರುವ ಘಟನೆ ನಗರದ ಹಲಸೂರಿನ ಕೇಂಬ್ರಿಡ್ಜ್ ಲೇಔಟ್‍ನಲ್ಲಿ ನಡೆದಿದೆ.

ಧನುಷ್ ಸಾವನ್ನಪ್ಪಿದ ಬಾಲಕ. ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಲೂರ್ದ್ ಚರ್ಚಿನ ಆವರಣದಲ್ಲಿ ಪಟಾಕಿ ಸಿಡಿಸುವ ವೇಳೆ ಬಾಲಕ ಮೃತಪಟ್ಟಿದ್ದಾನೆ.

ಪ್ರತಿ ಹೊಸ ವರ್ಷದ ಎರಡನೇ ಭಾನುವಾರ ಚರ್ಚ್ ನಲ್ಲಿ ಪಟಾಕಿ ಸಿಡಿಸುವ ಕಾರ್ಯಕ್ರಮ ಆಯೋಜನೆ ಆಗುತ್ತಿದ್ದು, ಸಾವಿರಾರು ಜನ ಭಾಗವಹಿಸುತ್ತಾರೆ. ಧನುಷ್ ಪ್ರತಿ ವರ್ಷ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಈ ವರ್ಷವೂ ಕೂಡ ಪಟಾಕಿ ಸಿಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ.

ಧನುಷ್ ತಲೆ ಮೇಲೆ ಪಟಾಕಿ ಬಿದ್ದ ಪರಿಣಾಮ ಮೆದುಳು ಹೊರಬಂದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಧನುಷ್ ತ್ಯಾಗರಾಜನಗರ ನಿವಾಸಿಯಾಗಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.