ಹೈದರಾಬಾದ್: 11 ವರ್ಷದ ಬಾಲಕ ಪೂರಿ ತಿಂದು ಸಾವನ್ನಪ್ಪಿರುವ ಘಟನೆ ತೆಲಂಗಾಣದ (Telangana) ಸಿಕಂದರಾಬಾದ್‌ನ (Secunderabad) ಶಾಲೆಯೊಂದರಲ್ಲಿ ನಡೆದಿದೆ.
ಮೃತ ಬಾಲಕನನ್ನು 6ನೇ ತರಗತಿಯ ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.
Advertisement
ಸಿಕಂದರಾಬಾದ್‌ನ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಿಂದ ತಂದ ಪೂರಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ತಿನ್ನುವಾಗ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ: ಡಾ ಹಗರಣದ ಲೋಕಾಯುಕ್ತ ವರದಿ ಇಂದು ಹೈಕೋರ್ಟ್‌ಗೆ ಸಲ್ಲಿಕೆ – ಸಿಬಿಐ ಅಂಗಳಕ್ಕೆ ತನಿಖೆ ಶಿಫ್ಟ್?
Advertisement
Advertisement
ಸೋಮವಾರ (ನ.25) ಶಾಲೆಯಲ್ಲಿ ಮಧ್ಯಾಹ್ನ ಊಟದ ವೇಳೆ ಮೂರು ಪೂರಿ ಒಟ್ಟಿಗೆ ತಿಂದ ಪರಿಣಾಮ ಬಾಲಕನಿಗೆ ಉಸಿರುಗಟ್ಟಿ ನೆಲಕ್ಕೆ ಕುಸಿದಿದ್ದಾನೆ. ಎಷ್ಟೇ ಎಚ್ಚರಗೊಳಿಸಿದರೂ ಪ್ರಜ್ಞೆ ಬರದ ಕಾರಣ ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರು ತಪಾಸಣೆ ಮಾಡಿ ಸಾವನ್ನಪ್ಪಿರುವುದಾಗಿ ಧೃಡಪಡಿಸಿದ್ದಾರೆ.
Advertisement
ಶಾಲಾ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗ ಊಟದ ಸಮಯದಲ್ಲಿ ಒಟ್ಟಿಗೆ ಮೂರು ಪೂರಿ ತಿಂದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇಲ್ಲಿಯವರೆಗೂ ಆಂಧ್ರಪ್ರದೇಶದಲ್ಲಿ (Andhrapradesh) ಈ ರೀತಿಯ ಮೂರು ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದೋಸೆ ತಿಂದು ಉಸಿರುಗಟ್ಟಿಸಿ ಸಾವನ್ನಪ್ಪಿದ್ದ. ವೆಂಕಟಯ್ಯ (43) ಅವರು ಸ್ಥಳೀಯ ಉಪಾಹಾರ ಗೃಹದಲ್ಲಿ ದೋಸೆ ತಿನ್ನುತ್ತಿದ್ದಾಗ ಅವರ ಗಂಟಲಿಗೆ ಆಹಾರ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ (Hyderabad) 37 ವರ್ಷದ ವ್ಯಕ್ತಿಯೊಬ್ಬರು ಕೋಳಿಯ ಮೂಳೆಯ ತುಂಡು ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಜನವರಿಯಲ್ಲಿ ಮಹಬೂಬ್‌ನಗರ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಊಟ ಮಾಡುವಾಗ ಕೋಳಿಯ ಮೂಳೆಯ ತುಂಡು ಗಂಟಲಿಗೆ ಸಿಲುಕಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ.ಇದನ್ನೂ ಓದಿ: ಜೋಡಿ ಕೊಲೆ ಕೇಸ್‌ಗೆ ಟ್ವಿಸ್ಟ್ – ಕಾಯಿಲೆ ಹುಷಾರಾಗ್ಲಿ ಅಂತ ಅಜ್ಜಿ ಮೇಲೆ ಮೊಮ್ಮಗನಿಂದಲೇ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ!